Shani Gochar: 2024ರಲ್ಲಿ ಮೂರು ಬಾರಿ ಪಥ ಬದಲಿಸಲಿರುವ ಶನಿ, ಈ ರಾಶಿಯವರಿಗೆ ಸುವರ್ಣ ಯುಗ
ಶನಿ ಮಹಾತ್ಮ: ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ಕರ್ಮಫಲದಾತ, ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. 2024ರಲ್ಲಿ ಶನಿಯ ಸ್ಥಾನದ ದೃಷ್ಟಿಯಿಂದ ತುಂಬಾ ವಿಶೇಷವಾಗಿರಲಿದೆ ಎಂದು ಹೇಳಲಾಗುತ್ತಿದೆ.
ಶನಿ ಸಂಚಾರ: ವಾಸ್ತವವಾಗಿ, 30 ವರ್ಷಗಳ ಬಳಿಕ ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು ಮುಂದಿನ ವರ್ಷ ಎಂದರೆ 2024ರಲ್ಲಿ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವುದಿಲ್ಲ. ಆದರೆ, ಮೂರು ಬಾರಿ ತನ್ನ ಪಥವನ್ನು ಬದಲಾಯಿಸಲಿದ್ದಾನೆ.
2024ರಲ್ಲಿ ಮೂರು ಬಾರಿ ಶನಿ ಪಥ ಬದಲಾವಣೆ: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಶನಿಯ ಸ್ಥಾನದಲ್ಲಿ ಮೂರು ಬಾರಿ ಬದಲಾವಣೆ ಕಂಡು ಬರಲಿದೆ.
2024ರಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ: * ಮೊದಲನೆಯದಾಗಿ, ಶನಿಯು 11 ಫೆಬ್ರವರಿ 2024 ರಂದು ಕುಂಭ ರಾಶಿಯಲ್ಲಿ ಅಸ್ತಮಿಸಲಿದೆ. * ಬಳಿಕ ಶನಿ ಮಾರ್ಚ್ 18, 2024 ರಂದು, ಅದೇ ರಾಶಿಯಲ್ಲಿ ಉದಯಿಸಲಿದ್ದಾನೆ. * ನಂತರ, ಜೂನ್ 29, 2024 ರಂದು ಶನಿ ದೇವನ ಹಿಮ್ಮುಖ ಚಾಲನೆ ಆರಂಭವಾಗಲಿದೆ.
ಶನಿ ಸಂಚಾರ ಬದಲಾವಣೆ ಪ್ರಭಾವ: ಶನಿ ಸಂಚಾರ ಬದಲಾವಣೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ. ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ವೃಷಭ ರಾಶಿ: 2024ರಲ್ಲಿ ಶನಿ ಸಂಚಾರದಲ್ಲಿ ಬದಲಾವನೆಯು ವೃಷಭ ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ವೃತ್ತಿ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದು. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
ಸಿಂಹ ರಾಶಿ: 2024ರಲ್ಲಿ ಶನಿ ಪಥ ಬದಲಾವಣೆಯ ಶುಭ ಪರಿಣಾಮಗಳು ಸಿಂಹ ರಾಶಿಯವರ ಮೇಲೂ ಕಂಡು ಬರಲಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. ಮಾತ್ರವಲ್ಲ, ಯಾವುದೇ ಕೆಲಸ ಕಾರ್ಯಗಳಲ್ಲಿ ಶತ್ರುಗಳ ವಿರುದ್ಧ ಜಯ ಪ್ರಾಪ್ತಿಯಾಗಲಿದೆ.
ಕುಂಭ ರಾಶಿ: ಮುಂದಿನ ವರ್ಷವೂ ಕುಂಭ ರಾಶಿಯಲ್ಲಿಯೇ ಸಂಚರಿಸಲಿರುವ ಶನಿ ದೇವನು ಈ ರಾಶಿಯವರಿಗೆ ಧನಾತ್ಮಕ ಪರಿಣಾಮಗಳನ್ನು ನೀಡಲಿದ್ದಾನೆ. ಉದ್ಯೋಗ ರಂಗದಲ್ಲಿ ಪ್ರಗತಿಯ ಅವಕಾಶಗಳಿವೆ. 2024ರ ಮಾರ್ಚ್ ನಂತರದ ಸಮಯ ಕುಂಭ ರಾಶಿಯವರಿಗೆ ಅತ್ಯುತ್ತಮವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.