Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿ
ವೈದಿಕ ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮನುಷ್ಯರಿಗೆ ಅವರವರ ಪಾಪ-ಪುಣ್ಯಗಳಿಗೆ ತಕ್ಕಂತೆ ಫಲ ನೀಡುತ್ತಾನೆ. ಶನಿ ಕೇವಲ ಕೆಟ್ಟ ಫಲಗಳನ್ನಷ್ಟೇ ಅಲ್ಲ, ಶುಭ ಫಲಗಳನ್ನು ಕೂಡ ನೀಡುತ್ತಾನೆ.
ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ 196 ದಿನ ಶನಿ ದಯೆ ಶಶ ರಾಜಯೋಗದ ಪರಿಣಾಮವಾಗಿ ಮೂರು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಕೈ ಹಾಕಿದ ಕೆಲಸಗಳಲೆಲ್ಲಾ ಯಶಸ್ಸು ಎನ್ನಲಾಗುತ್ತಿದೆ.
ಶನಿ ಮಹಾದಶದ ಫಲವಾಗಿ ಈ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆಯಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು ಇದರ ಪರಿಣಾಮ ನಿಮ್ಮ ಕೆಲಸದಲ್ಲೂ ಕಂಡು ಬರಲಿದೆ. ಆರೋಗ್ಯ ಸಮಸ್ಯೆಗಳು ಬಗೆಹರಿದು ಕುಟುಂಬದವರೊಂದಿಗೆ ಸುಂದರ ಕ್ಷಣಗಳನ್ನು ಆನಂದಿಸುವಿರಿ.
ಶನಿ ದಯೆಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆದಾಯದ ಮೂಲಗಳು ಹೆಚ್ಚಾಗಲಿವೆ. ವೈಯಕ್ತಿಕ ಜೀವನದಲ್ಲಿ ಮೂಡಿದ್ದ ಸಮಸ್ಯೆಗಳು ಬಗೆಹರಿದು ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಮದುವೆ ಸಂಬಂಧಿತ ಮಾತುಕತೆಗಳು ಬಗೆಹರಿಯಲಿವೆ.
ಶನಿ ದಯೆ ಶಶ ರಾಜಯೋಗದ ಪರಿಣಾಮವಾಗಿ ಈ ರಾಶಿಯವರ ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸದಂತಹ ಕನಸುಗಳು ನನಸಾಗುವ ಸಕಾಲ ಇದಾಗಿದೆ. ಒಟ್ಟಾರೆ ಇದು ನಿಮಗೆ ಸುವರ್ಣ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.