Shani Gochar: 2023ರಿಂದ 2025ರವರೆಗೆ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾಕಟಾಕ್ಷ

Thu, 15 Dec 2022-7:47 am,

2023ರ ಆರಂಭದಲ್ಲಿ ಕರ್ಮಫಲದಾತ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 30 ವರ್ಷಗಳ ಬಳಿಕ ಶನಿದೇವ ಜನವರಿ 17, 2023 ರಂದು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇಲ್ಲಿ ಶನಿಯ ವಿಪರೀತ ರಾಜಯೋಗ ನಿರ್ಮಾಣವಾಗಲಿದ್ದು ಇದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದೆ. ಇದರೊಂದಿಗೆ ಶನಿಯು 2023ರಿಂದ 2025ರವರೆಗೆ ಕೆಲವು ರಾಶಿಯವರಿಗೆ ಅಪಾರ ಆಶೀರ್ವಾದದ ಜೊತೆಗೆ ಸಂಪತ್ತಿನ ಹೊಳೆಯನ್ನು ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.

ಕರ್ಕಾಟಕ ರಾಶಿ: ವೈದಿಕ ಜ್ಯೋತಿಷ್ಯದ ಪ್ರಕಾರ, 30 ವರ್ಷಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಲಿರುವ ಶನಿ ದೇವನು ಕರ್ಕಾಟಕ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದ್ದಾನೆ. ಶನಿಯ ವಿಪರೀತ ರಾಜಯೋಗದ ಪರಿಣಾಮದಿಂದಾಗಿ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕರ್ಕಾಟಕ ರಾಶಿಯಾ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಮಾತ್ರವಲ್ಲ, ಈ ರಾಶಿಯ ವ್ಯಾಪಾರಸ್ಥರಿಗೂ ಭರ್ಜರಿ ಲಾಭವಾಗಲಿದೆ.

ಕನ್ಯಾ ರಾಶಿ: 2023ರ ಆರಂಭದಲ್ಲಿ ಶನಿಯ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗುವ ವಿಪರೀತ ರಾಜಯೋಗದ ಪರಿಣಾಮದಿಂದಾಗಿ ಈ ರಾಶಿಯವರಿಗೆ ಕೋರ್ಟು-ಕಚೇರಿಯ ವ್ಯವಹಾರಗಳಲ್ಲಿ ವಿಜಯ ಪ್ರಾಪ್ತಿಯಾಗಲಿದೆ. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಹರಸಿ ಬರಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಪರಿಹಾರ ದೊರೆಯಲಿದೆ. ಮಾತ್ರವಲ್ಲ, ನಿಮ್ಮ ಹಳೆಯ ಸಾಲಗಳು ಮುಕ್ತಾಯಗೊಂಡು ಮನಸ್ಸಿಗೆ ಶಾಂತಿ ಲಭಿಸಲಿದೆ.

ಧನು ರಾಶಿ:  2023ರಲ್ಲಿ ಕುಂಭ ರಾಶಿಗೆ ಶನಿ ಪ್ರವೇಶದಿಂದಾಗಿ ಈ ರಾಶಿಯವರಿಗೆ ಸಾಡೇ ಸಾತಿ ಶನಿ ಪ್ರಭಾವದಿಂದ ಮುಕ್ತಿ ದೊರೆಯಲಿದೆ. ಇದಲ್ಲದೆ, ವಿಪರೀತ ರಾಜಯೋಗದ ಪರಿಣಾಮದಿಂದಾಗಿ ಉದ್ಯೋಗದಲ್ಲಿ ಬಡ್ತಿಯೊಂದಿಗೆ ಆದಾಯ ಹೆಚ್ಚಳವೂ ಆಗಲಿದೆ. ಇಂದು ನಿಮ್ಮಲ್ಲಿ ವರ್ಷವಿಡೀ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮೀನ ರಾಶಿ:  ಕುಂಭ ರಾಶಿಯಲ್ಲಿ ನಿರ್ಮಾನವಾಲಿರುವ ಶನಿಯ ವಿಪರೀತ ರಾಜ ಯೋಗವು ಈ ರಾಶಿಯವರಿಗೆ ವಿದೇಶಕ್ಕೆ ಹೋಗುವ ಅವಕಾಶವನ್ನು ಕಲ್ಪಿಸಬಹುದು. ವಿದೇಶಿ ಸಂಬಂಧಿತ ವ್ಯಾಪಾರ ಮಾಡುವವರಿಗೆ ವಿಶೇಷ ಲಾಭವಾಗಲಿದೆ. ನೀವು ಕೈ ಹಾಕಿದ ಎಲ್ಲಾ ಕೆಲಸದಲ್ಲೂ ಶನಿಯ ಕೃಪಾಕಟಾಕ್ಷ ಪ್ರಾಪ್ತಿಯಾಗಲಿದ್ದು  ಈ ಸಮಯದಲ್ಲಿ ನಿಮ್ಮ ಭವಿಷ್ಯ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.

ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link