Shani Dev: 2025ರವರೆಗೆ ಈ 3 ರಾಶಿಗಳಿಗೆ ಅದೃಷ್ಟದ ಪರ್ವ ಕಾಲ.. ಸೋಲೇ ನೀಡದೇ ಕೃಪೆಯಿಟ್ಟು ಕಾಯುವ ಶನಿದೇವ!
ಪುರಾಣಗಳ ಪ್ರಕಾರ, ಶನಿ ದೇವರು ಸೂರ್ಯನ ಮಗ. ನಾವು ಮಾಡುವ ಕರ್ಮಗಳಿಗನುಗುಣವಾಗಿ ಫಲವನ್ನು ಕೊಡುವುದರಿಂದ ಶನಿಯನ್ನು ನ್ಯಾಯದೇವ ಎಂದು ಕರೆಯುತ್ತಾರೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
ಶನಿ ದೇವನು 2025ರ ವರೆಗೆ ಈ ರಾಶಿಯಲ್ಲಿಯೇ ಇರಲಿದ್ದಾನೆ. ಕುಂಭ ರಾಶಿಯಲ್ಲಿರುವ ಶನಿ ಈ ವರ್ಷ ಪೂರ್ತಿ ಮೂರು ರಾಶಿಯವರಿಗೆ ಅದೃಷ್ಟ ತರಲಿದ್ದಾನೆ.
ಧನು ರಾಶಿ: ಶನಿದೇವನ ಸಂಚಾರದಿಂದಾಗಿ ಧನು ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ವ್ಯಾಪಾರವು ವಿಸ್ತರಿಸುತ್ತದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಗಳು ನಿಮಗೆ ಲಾಭವನ್ನು ನೀಡುತ್ತವೆ. ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ. ನೀವು ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
ತುಲಾ ರಾಶಿ: ಕುಂಭ ರಾಶಿಯಲ್ಲಿರುವ ಶನಿ ನಿಮಗೆ ಅದೃಷ್ ತರುವನು. ವೃತ್ತಿಯಲ್ಲಿ ಉನ್ನತ ಶಿಖರಗಳನ್ನು ಏರುವಿರಿ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ನೀವು ಪ್ರೀತಿಸಿದವರನ್ನು ಮದುವೆ ಆಗುವಿರಿ. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂತಾನ ಸುಖವನ್ನು ಅನುಭವಿಸುವಿರಿ. ನೀವು ಬಡತನದಿಂದ ಹೊರಬರುತ್ತೀರಿ.
ಕರ್ಕಾಟಕ ರಾಶಿ: ಕುಂಭ ರಾಶಿಯಲ್ಲಿ ಶನಿಯ ಸಂಚಾರವು ಕರ್ಕಾಟಕ ರಾಶಿಯವರಿಗೆ ಅನೇಕ ಲಾಭಗಳನ್ನು ನೀಡುತ್ತದೆ. ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಅವರ ಆಸೆ ಈಡೇರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ.