27ವರ್ಷಗಳ ಬಳಿಕ ಪಿತೃವಿನ ನಕ್ಷತ್ರದಲ್ಲಿ ಶನಿ ಪ್ರವೇಶ: ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!
)
ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಕ್ರೂರಗ್ರಹ ಎಂದು ಪರಿಗಣಿಸಲಾಗಿರುವ ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮಾರ್ಚ್ 29, 2025ರಂದು ಶನಿ ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.
)
ಮೀನ ರಾಶಿಗೆ ಪ್ರವೇಶಿಸಿದ ತಿಂಗಳಲ್ಲಿ ಏಪ್ರಿಲ್ 28ರಂದು ಶನಿ ಪಿತೃವಿನ ನಕ್ಷತ್ರವಾದ ಉತ್ತರಾಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
)
ಬರೋಬ್ಬರಿ 27 ವರ್ಷಗಳ ಬಳಿಕ ಉತ್ತರಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶಿಸುತ್ತಿದ್ದು ಕೆಲವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ.
ವೃಷಭ ರಾಶಿ: ಶನಿ ನಕ್ಷತ್ರ ಪರಿವರ್ತನೆಯು ಈ ರಾಶಿಯವರಿಗೆ ದೀರ್ಘಕಾಲದ ಸಮಸ್ಯೆಯಿಂದ ಪರಿಹಾರವನ್ನು ನೀಡಲಿದೆ. ವ್ಯವಹಾರದಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಸಾಲದಿಂದ ಮುಕ್ತಿಯನ್ನು ಹೊಂದುವಿರಿ. ಹೊಸ ಮನೆ ಖರೀದಿ ಯೋಗವೂ ಇದೆ.
ಮಿಥುನ ರಾಶಿ: ಉತ್ತರಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶದೊಂದಿಗೆ ಈರಾಶಿಯಯ್ವರಿಗೆ ಆದಾಯದ ಮೂಲಗಳು ಸಹ ತೆರೆದುಕೊಳ್ಳಲಿವೆ. ಶನಿ ಅನುಗ್ರಹದಿಂದ ಉದ್ಯೋಗ ರಂಗದಲ್ಲಿ ಯಶಸ್ಸು, ಕೀರ್ತಿಯನ್ನು ಗಳಿಸುವಿರಿ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.
ತುಲಾ ರಾಶಿ: ಶನಿ ನಕ್ಷತ್ರ ಬದಲಾವನೆಯು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಉನ್ನತ ಹುದ್ದೆಗೇರಿಸಲಿದೆ. ಪೂರ್ವಿಕರ ಆಸ್ತಿಯಿಂದ ಲಾಭ, ಹೊಸ ಮನೆ ವಾಹನ ಖರೀದಿ ಸಾಧ್ಯತೆ. ಹೊಸ ವ್ಯವಹಾರದಲ್ಲಿ ಯಶಸ್ಸು ಲಭಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.