Shani Jayanti 2024: ಶನಿ ಕಾಟದಿಂದ ಪರಿಹಾರಕ್ಕಾಗಿ ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡಿ

Thu, 30 May 2024-7:00 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ. 

ಜ್ಯೇಷ್ಠ ಅಮಾವಾಸ್ಯೆಯ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ  6 ಜೂನ್ 2024, ಗುರುವಾರ ಶನಿ ಜಯಂತಿ ಆಚರಣೆ ಇರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಇದನ್ನು ಶನಿ ದೇವನ ಜನ್ಮ ದಿನ ಎನ್ನಲಾಗುತ್ತದೆ. 

ಶನಿ ಜಯಂತಿಯಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವ ಕಡಿಮೆ ಆಗಿ, ಶನಿ ಕಾಟದಿಂದ ಮುಕ್ತಿ ದೊರೆಯಲಿದೆ ಎನ್ನಲಾಗುತ್ತದೆ. ಅಂತಹ ಕೆಲವು ಉಪಾಯಗಳೆಂದರೆ... 

ಶನಿ ಜಯಂತಿಯಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನಿಯಮಾನುಸಾರ ಶನಿದೇವನಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನಿಂದ ಅಭಿಷೇಕ ಮಾಡಿ ಪೂಜಿಸಿದರೆ ಶುಭವಾಗುತ್ತದೆ. 

ಶನಿ ಜಯಂತಿಯಂದು ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗಿ ಅರಳಿ ಮರಕ್ಕೆ ನೀರು ಅರ್ಪಿಸಿ. ಶನಿ ದೇವನ ಮಂತ್ರಗಳನ್ನು ಪಠಿಸಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವ ಕಡಿಮೆಯಾಗುತ್ತದೆ.   

ಶನಿ ಜಯಂತಿಯಂದು ನೀವು ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಕಪ್ಪು ನಾಯಿಗೆ ನೀಡಿ. ಸಾಧ್ಯವಾದರೆ, ಕಾಗೆಗಳಿಗೂ ಈ ದಿನ ಆಹಾರ ನೀಡಿ. ಇದರಿಂದ ಶನಿ ದೋಷ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. 

ಶನಿ ದೇವ ಹನುಮನ ಭಕ್ತರಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿ, ಶನಿ ಜಯಂತಿಯಂದು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸುವುದರಿಂದ ಶನಿ ದೋಷ ಕಡಿಮೆಯಾಗುತ್ತದೆ. 

ಶನಿ ಜಯಂತಿಯಂದು ಬಡವರ ಸೇವೆ, ನಿಮ್ಮ ಕೈಲಾದದನ್ನು ದಾನ ಮಾಡುವುದರಿಂದಲೂ ಶನಿ ಕಾಟ ತಪ್ಪಿ, ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link