Shani Mangal Yuti: ಮೂರು ದಶಕಗಳ ಬಳಿಕ ಅಶುಭ ಯೋಗ ನಿರ್ಮಾಣ, 4 ರಾಶಿಯವರಿಗೆ ಭಾರೀ ನಷ್ಟ

Wed, 10 May 2023-8:04 am,

ಶನಿ-ಮಂಗಳರಿಂದ ನಿರ್ಮಾಣಗೊಂಡಿರುವ ಷಡಷ್ಟಕ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಮಂಗಳಕರ, ಅಶುಭಕರ ಯೋಗ ಎಂದು ಬಣ್ಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಅಶುಭ ಸ್ಥಾನದಲ್ಲಿರುವ ಮಂಗಳನು ಹಿಂಸೆಯನ್ನು ಸೂಚಿಸಿದರೆ, ಶನಿಯು ದುಃಖ, ಬಡತನಕ್ಕೆ ಕಾರಣನಾಗುತ್ತಾನೆ. ಇದೀಗ ಷಡಷ್ಟಕ ಯೋಗವು ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟದ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ. 

ಷಡಷ್ಟಕ ಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿ ತುಂಬಾ ಕಷ್ಟದ ಸಮಯವನ್ನು ತರಲಿದೆ. ಈ ಸಮಯದಲ್ಲಿ ಈ ರಾಶಿಯವರು ಯಾವುದೇ ರೀತಿಯ ಹೂಡಿಕೆ, ಆಸ್ತಿ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. 

ಅಶುಭಕಾರ ಷಡಷ್ಟಕ ಯೋಗವು ಸಿಂಹ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಉದ್ವಿಗ್ನತೆಯನ್ನು ಉಂಟು ಮಾಡಬಹುದು. ಮುಂದಿನ ಎರಡು ತಿಂಗಳುಗಳ ಕಾಲ ನೀವು ಯಾವುದೇ ರೀತಿಯ ವಾದ-ವಿವಾದಗಳನ್ನು ತಪ್ಪಿಸುವುದು ತುಂಬಾ ಒಳ್ಳೆಯದು. 

ಷಡಷ್ಟಕ ಯೋಗದ ಪರಿಣಾಮವಾಗಿ ಧನು ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಇದರಿಂದ ನೀವು ಮಾನಸಿಕವಾಗಿ ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ. 

ಶನಿ ಮಂಗಳರಿಂದ ನಿರ್ಮಾಣವಾಗುವ ಷಡಷ್ಟಕ ಯೋಗವು ಕುಂಭ ರಾಶಿಯವರನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸುತ್ತದೆ. ಈ ಸಮಯದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಧ್ಯಾನ-ಯೋಗದತ್ತ ಗಮನಹರಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link