ವರ್ಷ 2024ರ ಆರಂಭದ 3 ತಿಂಗಳು 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ, ಕಾರಣ ಇಲ್ಲಿದೆ!
Shani Margi 2024: ವರ್ಷ 2024ರ ಆಗಮನಕ್ಕೆ ಇನ್ನೇನು ಎರಡೇ ತಿಂಗಳು ಬಾಕಿ ಉಳಿದಿದೆ. ಹೀಗಿರುವಾಗ ವರ್ಷದ ಆರಂಭದಲ್ಲಿಯೇ ಶನಿ ಕುಂಭ ರಾಶಿಯಲ್ಲಿ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಹೀಗಾಗಿ 3 ರಾಶಿಗಳ ಜನರಿಗೆ 2024ರ ಆರಂಭದ ಮೂರು ತಿಂಗಳು ಅಪಾರ ಸಿರಿಸಂಪತ್ತನ್ನು ಶನಿ ಕರುಣಿಸಲಿದ್ದಾನೆ. Spiritual News In Kannada
ವೃಷಭ ರಾಶಿ: ಶನಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೆರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ನಿಮ್ಮ ವೃತ್ತಿ ಜೀವನದ ಸೌಕರ್ಯಗಳು ಹೆಚ್ಚಾಗಲಿವೆ. ಇದರಿಂದ ನೀವು ವೃತ್ತಿ ಜೀವನದಲ್ಲಿ ಸಾಕಸ್ತು ಪ್ರಗತಿಯನ್ನು ಕಾಣುವಿರಿ. ನಿಮ್ಮ ಪರಿಶ್ರಮದಿಂದ ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ ಉಂಟಾಗಲಿದೆ. ಶನಿ ನಿಮ್ಮ ರಾಶಿಯ ಭಾಗ್ಯಸ್ಥಾನದ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಕುಂಭ ರಾಶಿ: ಮೊದಲನೆಯದಾಗಿ ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ ಹೀಗಾಗಿ 2024 ಆರಂಭಿಕ ಮೂರು ತಿಂಗಳು ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿವೆ. ಇನ್ನೊಂದೆಡೆ ಶನಿ ನಿಮ್ಮ ರಾಶಿಯಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿ, ಲಗ್ನ ಭಾವದಲ್ಲಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ನೋಡಲು ನಿಮಗೆ ಸಿಗಲಿದೆ. ಸಾಮಾಜಿಕವಾಗಿ ಜನಮಾನಸದಲ್ಲಿ ನೀವು ಅಪಾರ ಖ್ಯಾತಿಯನ್ನು ಪಡೆಯುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ನಿಮಗೆ ಅತ್ಯುತ್ತಮ ಅವಕಾಶಗಳು ಒದಗಿ ಬರಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಬೆಂಬಲ ಸಿಗಲಿದೆ. ಅಪಾರ ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ.
ಮಿಥುನ ರಾಶಿ: ವರ್ಷ 2024ರ ಆರಂಭಿಕ ಮೂರು ತಿಂಗಳು ಆರ್ಥಿಕವಾಗಿ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿವೆ ಏಕೆಂದರೆ ಶನಿ ನಿಮ್ಮ ರಾಶಿಯ ಭಾಗ್ಯ ಸ್ಥಾನದಲ್ಲಿ ನೆರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೌಕರ ವರ್ಗದ ಜನರಿಗೆ ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಇಚ್ಛೆ ಆಕಾಂಕ್ಷೆಗಳು ಈಡೇರಲಿವೆ. ಕೌಟುಂಬಿಕ ವಾತಾವರಣ ಹಿತಕರವಾಗಿರಲಿದೆ. ಹೊಸ ವಾಹನ-ಸಂಪತ್ತು ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ. ಶನಿ ನಿಮ್ಮ ಗೋಚರ ಜಾತಕದ ಅಷ್ಟಮ ಭಾವಕ್ಕೆ ಅಧಿಪತಿ. ಹೀಗಾಗಿ ಸಂಶೋಧನೆ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)