ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲು

Mon, 21 Oct 2024-7:04 am,

ದೀಪಾವಳಿ ಬಳಿಕ ನವೆಂಬರ್ 15ರಂದು ಶನಿ ಮಾರ್ಗಿಯಾಗಲಿದ್ದಾನೆ. ಇದರೊಂದಿಗೆ ಕೆಲವರ ಬದುಕಿನಲ್ಲಿ ಶನಿ ಮಹಾದಶ ಆರಂಭವಾಗಲಿದೆ.   

ಪ್ರತಿಯೊಬ್ಬರಿಗೂ ಅವರ ಕರ್ಮಕ್ಕೆ ತಕ್ಕಂತೆ ಫಲ ನೀಡುವ ಶನಿಯ ನೇರ ಸಂಚಾರದಿಂದ ಕೆಲವರ ಜೀವನದಲ್ಲಿ ಕೆಟ್ಟ ಸಮಯ ಸರಿದು ಒಳ್ಳೆಯ ಸಮಯ ಆರಂಭವಾಗಲಿದೆ. 

ಆದಾಯದ ಮೂಲಗಳು ಹೆಚ್ಚಾಗಲಿದೆ. ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಜನರಿಗೆ ಯಶಸ್ಸು. ಮಕ್ಕಳಿಂದ ಶುಭ ವಾರ್ತೆ, ಮನೆಯಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. 

ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ, ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಉತ್ತಮ ನೌಕರಿ ದೊರೆಯವ ಸಂಭವವಿದೆ. ವ್ಯಾಪಾರಸ್ಥರಿಗೆ ಭರ್ಜರಿ ಲಾಭ. ಕುಟುಂಬದೊಂದಿಗೆ ಆನಂದದಾಯಕ ಸಮಯ ಕಳೆಯುವಿರಿ. 

ಮಾರ್ಗಿ ಶನಿ ಈ ರಾಶಿಯ ಜನರಿಗೆ ಕೆಲಸದಲ್ಲಿ ಸ್ಥಿರತೆಯನ್ನು ನೀಡಲಿದ್ದಾನೆ. ವ್ಯಾಪಾರದಲ್ಲಿ ಹೊಸ ಆರ್ಡರ್ ದೊರೆಯಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಸರಿದು ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. 

ಶನಿ ದಶೆಯಿಂದ ಬಹುದಿನಗಳ ಕನಸು ನನಸಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಯಶಸ್ಸು, ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಉತ್ತಮ ಆರೋಗ್ಯವನ್ನು ಸಹ ಅನುಭವಿಸುವಿರಿ. 

ಶನಿ ಕೃಪೆಯಿಂದ ಈ ರಾಶಿಯವರಿಗೆ ನಿಮ್ಮ ಸಂಕಲ್ಪಗಳು ಈಡೇರಲಿವೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳಲಿವೆ. ಸರ್ಕಾರಿ ಉದ್ಯೋಗಸ್ಥರಿಗೆ ನಿಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಸಿಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link