ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!

Sat, 10 Aug 2024-8:30 am,

ಕುಂಭ ರಾಶಿಯಲ್ಲಿ ಶನಿ ಮಾರ್ಗಿ: ದೀಪಾವಳಿಯ ನಂತರ 15 ನವೆಂಬರ್ 2024 ರಿಂದ ಶನಿಯು ನೇರ ನಡೆಗೆ ಬರುತ್ತಾನೆ. ಕುಂಭ ರಾಶಿಯಲ್ಲಿ ಶನಿ ನೇರವಾಗಿ ಚಲಿಸುವನು. ಶನಿಯ ನೇರ ಚಲನೆಯು ಕೆಲವು ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ.

ತುಲಾ ರಾಶಿ: ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಥಿಕ ಪ್ರಗತಿಯ ಸಾಧ್ಯತೆಗಳಿವೆ. ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬರಲಿದೆ. ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಗಾತಿಯ ಆದಾಯವೂ ಹೆಚ್ಚಾಗುತ್ತದೆ. ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಿಸಿ, ಜೀವನದಲ್ಲಿ ನೆಮ್ಮದಿ ಹೆಚ್ಚುತ್ತದೆ.

ಸಿಂಹ ರಾಶಿ: ಖಾಸಗಿ ಉದ್ಯೋಗಗಳನ್ನು ಮಾಡುವ ಜನರು ಉತ್ತಮ ಇನ್ಕ್ರಿಮೆಂಟ್ ಪಡೆಯುವ ಸಾಧ್ಯತೆಯಿದೆ. ಬಡ್ತಿ ಪಡೆಯಬಹುದು. ಉದ್ಯಮಿಗಳಿಗೆ ಸುವರ್ಣ ಸಮಯ ಪ್ರಾರಂಭವಾಗಬಹುದು. ಕೌಟುಂಬಿಕ ಪ್ರಗತಿ ಮತ್ತು ಸಂತೋಷ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಕಠಿಣ ಪರಿಶ್ರಮದಿಂದ ಹೊಸ ಆದಾಯದ ಮೂಲಗಳನ್ನು ಪಡೆಯುತ್ತೀರಿ. ಉತ್ತಮ ಪ್ರಮಾಣದ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದಾಯದ ಹೆಚ್ಚಳವು ಜೀವನ ಮಟ್ಟದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ. ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆಯುತ್ತೀರಿ. 

ಮೇಷ ರಾಶಿ: ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಗೌರವ ಸಿಗಲಿದೆ. ಆರ್ಥಿಕ ಲಾಭದ ಜೊತೆಗೆ ವ್ಯಾಪಾರಸ್ಥರಿಗೆ ಸಾಮಾಜಿಕವಾಗಿ ಪ್ರತಿಷ್ಠೆಯೂ ದೊರೆಯಲಿದೆ.

ಕುಂಭ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಹಠಾತ್ ಆರ್ಥಿಕ ಲಾಭದಿಂದ ತೃಪ್ತಿ ಇರುತ್ತದೆ. ಹಣದ ಒಳಹರಿವಿನ ಹೆಚ್ಚಳ ಆಗುವುದು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಇರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ.

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮನೆಮದ್ದು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link