30 ವರ್ಷಗಳ ಬಳಿಕ ಈ ರಾಶಿಯವರ ಮೇಲೆ ಶನಿ ಮಹಾತ್ಮನ ಕೃಪಾ ದೃಷ್ಟಿ : ಕಷ್ಟ ಕೊಟ್ಟಾತನಿಂದಲೇ ಬಾಳಲ್ಲಿ ಹರಿಯುವುದು ಬೆಳಕು !ಹೊಸ ವರ್ಷದಿಂದಲೇ ಹರಿದು ಬರುವುದು ಧನ ಸಂಪತ್ತು
ಹೊಸ ವರ್ಷದ ಆರಂಭದಲ್ಲಿಯೇ ಈ ಬಾರಿ ಅನೇಕ ಯೋಗಗಳು ನಿರ್ಮಾಣವಾಗುತ್ತಿವೆ. ಹೀಗಾಗಿ ಹೊಸ ವರ್ಷದಲ್ಲಿ ಕೆಲವು ರಾಶಿಯವರ ಜಾತಕ ಫಲ ಅದ್ಭುತವಾಗಿರಲಿದೆ.
ಇಲ್ಲಿವರೆಗೆ ಅಥವಾ ಇಷ್ಟು ವರ್ಷಗಳವರೆಗೆ ಅನುಭವಿಸುತ್ತಿದ್ದ ಕಷ್ಟದಿಂದ ಈ ವರ್ಷ ಮುಕ್ತಿ ಸಿಗಲಿದೆ. ಹೆಜ್ಜೆ ಹೆಜ್ಜೆಗೂ ಯಶಸ್ಸು ಒಲಿದು ಬರುವುದು.
ಮೇಷ ರಾಶಿ : ಹಠಾತ್ ಆರ್ಥಿಕ ಲಾಭವಾಗುವುದು. ದೊಡ್ಡದಾಗಿರಲಿ ಸಣ್ಣದಾಗಿರಲಿ ಎಲ್ಲಾ ರೀತಿಯ ಸಾಲದಿಂದ ಮುಕ್ತಿ ಸಿಗುವುದು. ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುವುದು. ವಿದ್ಯಾರ್ಥಿಗಳು ಕೂಡಾ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಮಕರ ರಾಶಿ :ಹೊಸ ವರ್ಷ ಶನಿ ದೆಸೆಯಿಂದ ಮುಕ್ತಿ ಪಡೆಯುವ ಸುಸಮಯ. ಹೊಸ ವರ್ಷ ನಿಮ್ಮ ಜೀವನದಲ್ಲಿ ಎಲ್ಲವೂ ಹೊಸತೇ ಆಗಲಿದೆ.ಉದ್ಯೋಗದಲ್ಲಿ ಬಡ್ತಿ ಸಿಗುವುದು. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ.
ಕುಂಭ ರಾಶಿ :ಉದ್ಯೋಗವಾಗಲಿ, ವ್ಯಾಪಾರವಾಗಲಿ ಗೆಲುವು ನಿಮ್ಮದಾಗುವುದು. ಶನಿದೆಸೆಯ ಕೊನೆಯ ಚರಣ ನಡೆಯುತ್ತಿದ್ದರೂ ಶನಿದೇವನ ಕೃಪಾ ದೃಷ್ಟಿ ನಿಮ್ಮ ಮೇಲಿರುವುದು. ಆರೋಗ್ಯ ಚೆನ್ನಾಗಿರುತ್ತದೆ.ನಿಮ್ಮ ಪಾಲಿಗೆ ಈ ವರ್ಷ ಅದೃಷ್ಟದ ವರ್ಷವಾಗುವುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.