Shani Nakshatra Parivartan: ಶನಿ ನಕ್ಷತ್ರ ಪರಿವರ್ತನೆ ಈ 3 ರಾಶಿಯ ಜನರಿಗೆ ಕೀರ್ತಿ ಯಶಸ್ಸು
ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿ ದೇವನು ಏಪ್ರಿಲ್ 6 ರಂದು ಪೂರ್ವಭಾದ್ರಪದ ನಕ್ಷತ್ರದ ಮೊದಲ ಪಾದವನ್ನು ಪ್ರವೇಶಿಸಿದನು. ಮೇ ತಿಂಗಳಿನ ಎರಡನೇ ವಾರದಲ್ಲಿ ಪೂರ್ವಭಾದ್ರಪದ ಮೊದಲ ಪಾದವನ್ನು ಬಿಟ್ಟು ಎರಡನೇ ಪಾದಕ್ಕೆ ಪದಾರ್ಪಣೆ ಮಾಡಲಿದ್ದಾನೆ.
ಶನಿ ದೇವನು 2024ರ ಮೇ 12 ರಂದು ಬೆಳಿಗ್ಗೆ 08:08ಕ್ಕೆ ನಕ್ಷತ್ರ ಪರಿವರ್ತನೆ ಹೊಂದಲಿದ್ದು, ಆಗಸ್ಟ್ 18 ರವರೆಗೆ ಪೂರ್ವಭಾದ್ರಪದ ನಕ್ಷತ್ರಪುಂಜದ ಎರಡನೇ ಪಾದದಲ್ಲೇ ಸಂಚರಿಸಲಿದ್ದಾನೆ.
ಶನಿ ನಕ್ಷತ್ರ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರು ಅಪಾರ ಯಶಸ್ಸು, ಸಂಪತ್ತನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಶನಿ ನಕ್ಷತ್ರ ಪರಿವರ್ತನೆಯು ಮೇಷ ರಾಶಿಯವರ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಈ ಸಮಯದಲ್ಲಿ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಉದ್ಯೋಗಿಗಳಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.
ಶನಿ ನಕ್ಷತ್ರ ಪರಿವತ್ರನೆಯು ಕನ್ಯಾ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.
ಶನಿ ನಕ್ಷತ್ರ ಬದಲಾವಣೆಯು ಧನು ರಾಶಿಯ ಜನರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ನೀಡಲಿದೆ. ಹೊಸ ಕೆಲಸವನ್ನು ಆರಂಭಿಸಲು ಬಯಸುವವರು ಮೇ 12ರ ಬಳಿಕ ಕೆಲಸ ಪ್ರಾರಂಭಿಸುವುದರಿಂದ ಕಾರ್ಯ ಸಿದ್ಧಿ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.