Shani Nakshatra Parivartane: ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಸಂಪತ್ತು ವೃದ್ಧಿ

Mon, 06 May 2024-6:55 am,

30 ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಕರ್ಮಫಲದಾತ ಶನಿದೇವನು ಶೀಘ್ರದಲ್ಲೇ ತನ್ನ ಸಂಚಾರದಲ್ಲಿ ಬದಲಾವಣೆ ಮಾಡಲಿದ್ದಾನೆ. 

ಪ್ರಸ್ತುತ ಪೂರ್ವಾಭಾದ್ರಪದ ನಕ್ಷತ್ರದ ಮೊದಲೇ ಪಾದದಲ್ಲಿ ಸಂಚರಿಸುತ್ತಿರುವ ಶನಿ ದೇವನು 2024 ರ ಮೇ 12 ರಂದು ಬೆಳಿಗ್ಗೆ 8.08 ಕ್ಕೆ ಪೂರ್ವಾಭಾದ್ರಪದ ನಕ್ಷತ್ರದ ದ್ವಿತೀಯ ಪಾದಕ್ಕೆ ಸಾಗಲಿದ್ದಾನೆ. 

ಪೂರ್ವ ಭಾದ್ರಪದ ನಕ್ಷತ್ರದ ಎರಡನೇ ಸ್ಥಾನದಲ್ಲಿ ಶನಿ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ಇದು ಭಾಗ್ಯೋದಯದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...   

ಶನಿ ನಕ್ಷತ್ರ ಬದಲಾವಣೆಯು ವೃಷಭ ರಾಶಿಯವರ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ತುಂಬಾ ಮಂಗಳಕರ ಫಲಗಳನ್ನು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ಹೊಸ ಉದ್ಯೋಗ ಆರಂಭಿಸಲು ಬಯಸುವವರಿಗೆ ಶುಭ ಸಮಯ. 

ಶನಿ ನಕ್ಷತ್ರ ಬದಲಾವಣೆಯ ಫಲವಾಗಿ ಮಿಥುನ ರಾಶಿಯ ಜನರಿಗೆ ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರಸ್ಥರಿಗೆ ಹಣದ ಮೂಲಗಳು ಹೆಚ್ಚಾಗಲಿದ್ದು ಆದಾಯ ದುಪ್ಪಟ್ಟಾಗಲಿದೆ. ಅವಿವಾಹಿತರಿಗೆ ವಿವಾಹ ಮಾತುಕತೆಗಳು ಮುಂದುವರೆಯಬಹುದು. 

ಶನಿ ನಕ್ಷತ್ರ ಬದಲಾವಣೆಯು ಮಕರ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಹೆಜ್ಜೆ ಹೆಜ್ಜೆಗೂ ಯಶಸ್ಸನ್ನು ಗಳಿಸುವಿರಿ. ಉದ್ಯೋಗಸ್ಥರಿಗೆ ವೇತನ ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link