ಅಕ್ಟೋಬರ್ 17ರವರೆಗೆ ಈ 3 ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾರೆ ರಾಹು-ಶನಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿಸ್ತಿನ ಗ್ರಹವಾದ ಶನಿಯು ಕರ್ಮದ ಪಾಠಗಳನ್ನು ಪ್ರತಿನಿಧಿಸುತ್ತಾನೆ. ಶನಿ ಪ್ರಭಾವವು ವ್ಯಕ್ತಿಯ ಕೆಟ್ಟ ಕೆಲಸಗಳಿಗೆ ತಕ್ಕಂತೆ ಆತನಿಗೆ ಫಲ ನೀಡಿ ಅವನನ್ನು ಸರಿ ದಾರಿಯಲ್ಲಿ ತರಲು ಪ್ರಯತ್ನಿಸುತ್ತಾನೆ. ನೆರಳು ಗ್ರಹ ರಾಹು ಆಸೆ, ಭ್ರಮೆ, ಅಜ್ಞಾತಕ್ಕೆ ಸಂಬಂಧಿಸಿದೆ. ಅರ್ಥಾತ್, ಈ ಗ್ರಹವು ಅತೃಪ್ತಿಯ ಕಾಡು ಬಯಕೆಗಳನ್ನು ಪ್ರತಿನಿಧಿಸುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ರಾಹು ಒಂದೇ ರಾಶಿ ಚಕ್ರದಲ್ಲಾಗಲಿ, ಇಲ್ಲವೇ ಒಂದೇ ನಕ್ಷತ್ರ ಪುಂಜದಲ್ಲಾಗಲಿ ಸಂಯೋಜಿಸಿದಾಗ ಅದರ ಶುಭ-ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನ್ಮ ಜಾತಕದಲ್ಲಿ ಶನಿ ಮತ್ತು ರಾಹು ಒಟ್ಟು ಗೂಡಿದಾಗ ರಾಹುವಿನ ತೀವ್ರ ಚಾಲನೆಯು ಶನಿಯ ಎಚ್ಚರಿಕೆಯ ಸ್ವಭಾವದೊಂದಿಗೆ ಘರ್ಷಣೆ ಹೊಂದಿ ಮನುಷ್ಯನಲ್ಲಿ ಆಂತರಿಕ ಉದ್ವೇಗವನ್ನು ಉಂಟುಮಾಡುತ್ತದೆ. ಇದೀಗ ಶತಬಿಷಾ ನಕ್ಷತ್ರದಲ್ಲಿ ರಾಹು-ಶನಿ ಸಂಯೋಜನೆ ಹೊಂದಿದ್ದು, 17 ಅಕ್ಟೋಬರ್ 2023ರವರೆಗೆ ಈ ಎರಡೂ ಗ್ರಹಗಳು ಇದೇ ನಕ್ಷತ್ರದಲ್ಲಿ ಇರಲಿವೆ. ಇದರ ಅಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರುತ್ತದೆ. ಹೀಗಾಗಿ ರಾಹು- ಶನಿ ಇಬ್ಬರೂ ಈ ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ
ಶನಿ ರಾಹು ಸಂಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಬೇರೆಯವರೊಂದಿಗೆ ಹೊಂದಾಣಿಕೆಯ ಕೊರತೆ ಹೆಚ್ಚು ಕಾಡುತ್ತದೆ. ಮಾತ್ರವಲ್ಲ, ಇದರಿಂದಾಗಿ ನೀವು ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಬಹುದು. ಹಣಕಾಸಿನ ವಿಷಯದಲ್ಲೂ ಸಮಯ ಅಮಂಗಳಕರವಾಗಿದ್ದು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.
ಶತಭಿಷ ನಕ್ಷತ್ರದಲ್ಲಿ ಶನಿ-ರಾಹು ಸಂಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಲಿದ್ದು ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಿ. ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳಿ, ಇಲ್ಲವೇ, ಅದುವೇ ನಿಮಗೆ ಮುಳುವಾಗಲಿದೆ. ಕುಟುಂಬಸ್ಥರೊಂದಿಗೂ ಬಿರುಕು ಮೂಡುವ ಸಾಧ್ಯತೆ ಇರುವುದರಿಂದ ಸಂಬಂಧಗಳ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ.
ಕುಂಭ ರಾಶಿಯವರಿಗೆ ಮುಂದಿನ ಎರಡು ತಿಂಗಳು ತುಂಬಾ ಸವಾಲಿನಿಂದ ಕೂಡಿದ ಸಮಯ ಎಂತಲೇ ಹೇಳಬಹೂ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದರ ಜೊತೆಗೆ ಹಣಕಾಸಿನ ನಷ್ಟವೂ ಉಂಟಾಗಬಹುದು. ಹಾಗಾಗಿ, ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಸಾಧ್ಯವಾದರೆ ಅಕ್ಟೋಬರ್ 17, 2023ರವರೆಗೆ ಮುಂದೂಡುವುದು ಒಳ್ಳೆಯದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.