ಶನಿ ರಾಜಯೋಗ : ದೀಪಾವಳಿಗೂ ಮುನ್ನವೇ ಈ ರಾಶಿಗೆ ಐಶ್ವರ್ಯ ಧಾರೆ ಎರೆಯುವ ಶನಿದೇವ, ಬಡವನೂ ಕುಬೇರನಾಗುವ!

Thu, 19 Oct 2023-8:17 am,

Shani Rajyoga Effects : ಎಲ್ಲಾ ಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುವನು. 

Saturn Direct Effects : ಶನಿ ಗೋಚಾರ ಫಲ- ಪ್ರಸ್ತುತ ಕುಂಭ ರಾಶಿಯಲ್ಲಿ ಶನಿ ವಕ್ರಿ ನಡೆಯುತ್ತಿದ್ದು, ನವೆಂಬರ್ 4 ರಂದು ನೇರವಾಗಿ ಚಲಿಸಲಿದ್ದಾನೆ. ದೀಪಾವಳಿಗೂ ಮುನ್ನ ಶನಿಯ ಸಂಚಾರದಲ್ಲಿ ಆಗುವ ಬದಲಾವಣೆ ಹಲವು ರಾಶಿಗಳ ಅದೃಷ್ಟ ಬೆಳಗಲಿದೆ.

ವೃಷಭ ರಾಶಿಗೆ ಶನಿ ಮಾರ್ಗಿ ಪ್ರಭಾವ : ಶನಿ ಮಾರ್ಗಿ ತುಂಬಾ ಪ್ರಯೋಜನಕಾರಿಯಾಗಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಆಸ್ತಿ ಸಂಬಂಧಿತ ಭೂಮಿಯನ್ನು ಖರೀದಿಸಬಹುದು. ಆರ್ಥಿಕ ಸ್ಥಿತಿ ಬಲವಾಗುತ್ತದೆ. ನಿರುದ್ಯೋಗಿಗಳಿಗೆ ನವೆಂಬರ್ ಮೊದಲ ವಾರದ ನಂತರ ಒಳ್ಳೆಯ ಸುದ್ದಿ ಸಿಗಬಹುದು.  

ತುಲಾ ರಾಶಿ ಮೇಲೆ ಶನಿದೇವನ ಕೃಪೆ : ಶನಿಯು ನೇರವಾಗಿ ಚಲಿಸುವುದು ತುಲಾ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ನೀವು ಬಹಳ ಸಮಯದಿಂದ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ, ನವೆಂಬರ್ 4 ರ ನಂತರ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರ ಮಾಡುವ ಜನರು ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ.  

ಮಿಥುನ ರಾಶಿ ಮೇಲೆ ಶನಿ ನೇರ ನಡೆ ಪ್ರಭಾವ : ಶನಿ ನೇರ ನಡೆ ನಿಮ್ಮ ಅದೃಷ್ಟ ಬೆಳಗುವುದು. ನವೆಂಬರ್ 4 ರ ನಂತರ ಯಶಸ್ಸನ್ನು ಪಡೆಯುವ ಎಲ್ಲಾ ಅವಕಾಶಗಳಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ನಡೆಯುತ್ತಿದ್ದರೆ ಆಗ ನಿರ್ಧಾರ ನಿಮ್ಮ ಪರವಾಗಿಯೇ ಇರುತ್ತದೆ. ಸಮಾಜದಲ್ಲಿ ನಿಮ್ಮ ಗೌರ ವೃದ್ಧಿಯಾಗುವುದು.   

ಕುಂಭ ರಾಶಿಗೆ ಶನಿ ಗೋಚಾರ ಫಲ : ಶನಿ ಗೋಚಾರ ಕುಂಭ ರಾಶಿಯವರಿಗೆ ವರದಾನವಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಆರ್ಥಿಕ ಸ್ಥಿತಿಯು ಬಲವಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link