Shani Deva: ಮುಂದಿನ ವರ್ಷ ಈ ರಾಶಿಯವರಿಗೆ ಶನಿ ಸಾಡೇಸಾತಿ, ಧೈಯಾ ಪ್ರಭಾವ: ತಪ್ಪಿದ್ದಲ್ಲ ಸಂಕಷ್ಟ
2023ರ ಆರಂಭದಲ್ಲಿ ತನ್ನ ಮೂಲ ತ್ರಿಕೋನ ರಾಶಿಯನ್ನು ಪ್ರವೇಶಿಸಿರುವ ಶನಿಯು 2024 ರಲ್ಲಿಯೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಆದರೆ, ಈ ಸಂಯದಲ್ಲಿ ಕೆಲವು ರಾಶಿಯವರ ಜೀವನ ಸಂಕಷ್ಟಗಳ ಸರಮಾಲೆಯಿಂದ ಸುತ್ತುವರೆದಿರಲಿದೆ.
2024ರಲ್ಲಿ ಶನಿ ಸಂಚಾರ ಪ್ರಭಾವದಿಂದಾಗಿ ಮೂರು ರಾಶಿಯವರು ಶನಿಯ ಸಾಡೇ ಸಾತಿಯ ನೆರಳಿನಲ್ಲಿದ್ದರೆ, ಎರಡು ರಾಶಿಯವರು ಶನಿ ಧೈಯಾ ಪ್ರಭಾವವನ್ನು ಎದುರಿಸಬೇಕಾಗುತ್ತದೆ.
ಮುಂದಿನ ವರ್ಷ ಮಕರ, ಕುಂಭ ಮತ್ತು ಮೀನ ಈ ಮೂರು ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಭಾವ ಇರಲಿದೆ.
ಯಾವ ರಾಶಿಯವರಿಗೆ ಶನಿ ಸಾಡೇಸಾತಿ ಯಾವ ಹಂತದಲ್ಲಿದೆ ಎಂದು ನೋಡುವುದಾದರೆ... * 2024 ರಲ್ಲಿ, ಹಂತವು ಮಕರ ರಾಶಿಯ ಜನರ ಮೇಲೆ ಶನಿ ಸಾಡೇ ಸಾತಿಯ ಮೂರನೇ ಹಂತ ಪ್ರಾರಂಭವಾಗುತ್ತದೆ. * ಕುಂಭ ರಾಶಿಯವರಿಗೆ 2024ರಲ್ಲಿ ಶನಿಯ ಸಾಡೇಸಾತಿ ಎರಡನೇ ಹಂತ ನಡೆಯಲಿದೆ. * ಇದೇ ವೇಳೆ 2024ರಲ್ಲಿ ಮೀನ ರಾಶಿಯವರಿಗೆ ಶನಿಯ ಮೊದಲ ಹಂತವು ಮುಂದುವರೆಯಲಿದೆ.
2024ರಲ್ಲಿ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸಲಿರುವ ಶನಿಯು ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರ ಮೇಲೆ ಧೈಯಾ ಪ್ರಭಾವವನ್ನು ಬೀರಲಿದ್ದಾನೆ. ಹಾಗಾಗಿ, ಈ ಸಮಯದಲ್ಲಿ ಈ ಎರಡೂ ರಾಶಿಯವರು ಬಹಳ ಜಾಗರೂಕರಾಗಿರುವುದು ಅಗತ್ಯ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.