Shani Shukra Yog 2024: ಮೂವತ್ತು ವರ್ಷಗಳ ಬಳಿಕ ಶನಿ ಶುಕ್ರರ ಮೈತ್ರಿ, ಧನದಾತನ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭ!

Sun, 07 Jan 2024-3:48 pm,

Shani-Shukra Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿಯಿಂದ ಶನಿ-ಶುಕ್ರ ಯೋಗ ರಚನೆಯಾಗುತ್ತಿದೆ. ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡಲಿದೆ. Spiritual News In Kannada  

ಮಿಥುನ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ನೀವು ಅಂದುಕೊಂಡ ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಹಲವು ಶುಭ ಸಮಾಚಾರಗಳು ಸಿಗಲಿವೆ. ಆಕಸ್ಮಿಕ ಧನಪ್ರಾಪ್ತಿಯ ಸ್ಟ್ರಾಂಗ್ ಸಂಕೇತಗಳಿವೆ. ದೇಶ ವಿದೇಶಗಳಿಗೆ ಯಾತ್ರೆ ಕೂಡ ಸಂಭವಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಮಯ ಸಾಕಷ್ಟು ಅದ್ಬುತವಾಗಿದೆ. 

ಕುಂಭ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ಉತ್ಸಾಹ ಕಂಡುಬರಲಿದೆ. ಶನಿ ಶುಕ್ರರ ಮೈತ್ರಿಯ ಕಾರಣ ನಿಮ್ಮ ಜ್ಞಾನದಲ್ಲಿ ವೃದ್ಧಿಯಾಗಲಿದ್ದು, ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿದ್ದು, ಇದರಿಂದ ನಿಮಗೆ ಆಸ್ತಿಪಾಸ್ತಿ-ವಾಹನ ಸುಖ ಪ್ರಾಪ್ತಿಯಾಗಲಿದೆ. ಅವಿವಾಹಿತ ಜನರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. 

ತುಲಾ ರಾಶಿ: ಈ ಯೋಗ ನಿಮ್ಮ ಜಾತಕದ ಪಂಚಮ ಭಾವದಲ್ಲಿ ರಚನೆಯಾಗಲಿದೆ. ಹೀಗಿರುವಾಗ ಮಕ್ಕಳಿಗೆ ಸಂಬಂಧಿಸಿದ ಹಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುವಿರಿ. ಅರ್ಥಾತ್ ಮಕ್ಕಳ ವಿವಾಹ ಅಥವಾ ನೌಕರಿ ಸುದ್ದಿ ನಿಮಗೆ ಸಿಗಲಿದೆ. ತುಲಾ ರಾಶಿಯ ಜನರ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ಇದಲ್ಲದೆ ನಿಮಗೆ ಆಕಸ್ಮಿಕ ಧನಲಾಭ ಕೂಡ ಸಂಭವಿಸುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link