Samsaptak Yoga 2024: ಇನ್ನೆರಡು ವಾರಗಳಲ್ಲಿ ಎದುರುಬದುರಾಗಲಿರುವ ಪಿತಾ-ಪುತ್ರರಿಂದ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್
ಗ್ರಹಗಳ ರಾಜ ಸೂರ್ಯದೇವ ಆಗಸ್ಟ್ 16 ರಂದು ಕರ್ಕಾಟಕ ರಾಶಿಯನ್ನು ತೊರೆದು ತನ್ನದೇ ರಾಶಿಚಕ್ರ ಚಿಹ್ನೆ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಶನಿದೇವ ಕೂಡ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ.
ಸೂರ್ಯ ಸಿಂಹ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿರುವಾಗ ಎರಡೂ ಗ್ರಹಗಳು 7ನೇ ಮನೆಯಲ್ಲಿ ಪರಸ್ಪರ ಎದುರು ನೋಡುತ್ತಿರುತ್ತವೆ. ಇದರಿಂದ ಸಂಸಪ್ತಕ ಎನ್ನುವ ವಿಶೇಷ ರಾಜಯೋಗ ನಿರ್ಮಾಣವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಸಪ್ತಕ ಯೋಗವನ್ನು ಶುಭಕರ ರಾಜಯೋಗ ಎಂದು ಪರಿಗಣಿಸಲಾಗಿದ್ದು, ಈ ರಾಜಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ವೃಷಭ ರಾಶಿ: ಸಂಸಪ್ತಕ ಯೋಗವು ಈ ರಾಶಿಯ ಜನರಿಗೆ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ. ಈ ವೇಳೆ, ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸ್ಥ್ತಿ ಸುಧಾರಿಸಲಿದೆ. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೈ ಹಾಕಿದ ಕೆಲಸಗಲಲ್ಲೆಲ್ಲಾ ಯಶಸ್ಸನ್ನು ಕಾಣುವಿರಿ.
ಮಿಥುನ ರಾಶಿ: ಈ ರಾಶಿಯ ಜನರಿಗೆ ಜೀವನದಲ್ಲಿ ಕಷ್ಟಗಳು ಸರಿದು ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ದಾಂಪತ್ಯ ಜೀವನದಲ್ಲಿ ಮೂಡಿದ್ದ ವಿರಸ ಕೊನೆಗೊಳ್ಳಲಿದೆ. ದಿಢೀರ್ ಧನಲಾಭ ಸಾಧ್ಯತೆ ಇದ್ದು, ವ್ಯಾಪಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು.
ಸಿಂಹ ರಾಶಿ: ಈ ರಾಶಿಯ ವೃತ್ತಿಪರರು ಉದ್ಯೋಗದಲ್ಲಿ ಬದಲಾವಣೆಗಳನ್ನು ಕಾಣಬಹುದು. ಇದರಿಂದ ಉತ್ತಮ ಪ್ರತಿಫವನ್ನು ಕೂಡ ಅನುಭವಿಸುವಿರಿ. ದೀರ್ಘ ಸಮಯದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಯಾವುದೇ ಹೊಸ ಯೋಜನೆಯ ಬಗ್ಗೆ ಯೋಚಿಸುತ್ತಿರುದ್ದರೆ ಧೈರ್ಯವಾಗಿ ಮುಂದುವರೆಯಿರಿ.
ತುಲಾ ರಾಶಿ: ಪಿತಾ-ಪುತ್ರರಿಂದ ನಿರ್ಮಾಣವಾಗಿರುವ ಈ ಶುಭ ಯೋಗವು ಶತ್ರುಗಳ ವಿರುದ್ಧ ಜಯವನ್ನು ನೀಡಲಿದೆ. ವ್ಯಾಪಾರ ವರ್ಗದವರಿಗೆ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ಮಾತನ್ನು ಉತ್ತಮ ಬಂಡವಾಳವನ್ನಾಗಿ ಮಾಡಿಕೊಳ್ಳುವುದರಿಂದ ಬಂಪರ್ ಲಾಭ ಗಳಿಸಬಹುದು.
ಧನಸ್ಸು ರಾಶಿ: ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಸಮಯ ಉತ್ತಮವಾಗಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರಲಿದ್ದು ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಳಿವೆ. ನಿಮ್ಮ ಸಂತಾನದಿಂದ ಶುಭವಾರ್ತೆ ಕೇಳುವ ಸಾಧ್ಯತೆ ಇದೆ.
ಮಕರ ರಾಶಿ: ಶುಭಕರ ಸಂಸಪ್ತಕ ರಾಜಯೋಗದಿಂದಾಗಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದರಿಂದ ಜೀವನದಲ್ಲಿ ಹೆಜ್ಜೆ-ಹೆಜ್ಜೆಗೂ ಯಶಸ್ಸು ನಿಮ್ಮದಾಗಲಿದೆ. ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ ಹೆಚ್ಚಾಗಲಿದೆ. ಹೂಡಿಕೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.