Shani Surya Yuti: 30 ವರ್ಷಗಳ ಬಳಿಕ ಶನಿಯ ರಾಶಿಯಲ್ಲಿ ಪಿತಾ-ಪುತ್ರನ ಸಂಯೋಗ, ಈ ರಾಶಿಯವರಿಗೆ ಭಾರೀ ಲಾಭ

Thu, 15 Feb 2024-6:46 am,

ಕಳೆದ ವರ್ಷ (2023)ರಲ್ಲಿ ಸ್ವ ರಾಶಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಮಹಾತ್ಮ ಮುಂದಿನ ವರ್ಷ (2025) ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

ಗ್ರಹಗಳ ರಾಜ ಸೂರ್ಯ ದೇವನು ಇತ್ತೀಚೆಗೆ ಫೆಬ್ರವರಿ 13, 2024ರ ಮಂಗಳವಾರದಂದು ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಮಾರ್ಚ್ 13, 2024ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

ಕುಂಭ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಬರೋಬ್ಬರಿ 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ತಂದೆ ಸೂರ್ಯದೇವನೊಂದಿಗೆ ಸೂರ್ಯಪುತ್ರ ಶನಿ ಸಂಯೋಗ ರೂಪುಗೊಂಡಿದೆ. 

ಸೂರ್ಯ-ಶನಿಯ ಸಂಯೋಗದ ಫಲ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ... 

ಮಿಥುನ ರಾಶಿ:  ಮೂರು ದಶಕಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಸೂರ್ಯರ ಸಂಯೋಗವು ಮಿಥುನ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ಪ್ರಯೋಜನವನ್ನು ನೀಡಲಿದೆ. ಇನ್ನೂ ಮದುವೆಯಾಗದವರ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಲಿದೆ. ಆತ್ಮವಿಶ್ವಾಸದಿಂದ ಮಾಡಿದ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. 

ಸಿಂಹ ರಾಶಿ:  ಸೂರ್ಯ-ಶನಿಯ ಸಂಯೋಗವು ಸಿಂಹ ರಾಶಿಯ ಜನರ ಜೀವನದಲ್ಲಿ ಭಾರೀ ಪ್ರಯೋಜನವನ್ನು ತರಲಿದೆ. ಈ ಸಮಯದಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ತಲೆದೋರಿದ್ದ ಭಿನ್ನಾಭಿಪ್ರಾಯಗಳು ಪರಿಹರಿಸಲ್ಪಡುತ್ತವೆ. ಹಣದ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಉತ್ತಮಗೊಳ್ಳಲಿದೆ. 

ಮಕರ ರಾಶಿ:  ಪಿತಾ-ಪುತ್ರರ ಸಂಯೋಗವು ಮಕರ ರಾಶಿಯ ಜನರಿಗೂ ಸಹ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನೀವು ಉದೋಗ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link