Shani Transit 2024: ಶನಿದೇವರ ಕೃಪೆಯಿಂದ 2027ರವರೆಗೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!

Mon, 23 Sep 2024-10:30 pm,

ಶನಿಯು 30 ವರ್ಷಗಳ ನಂತರ ತನ್ನದೇಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಮುಂದಿನ ವರ್ಷ ಮಾರ್ಚ್ 2025ರಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತದೆ. ಆ ನಂತರ 2025ರ ಮಾರ್ಚ್ 29ರಂದು ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಶನಿಯು 2027ರ ಜೂನ್ 3ರವರೆಗೆ ಮೀನ ರಾಶಿಯಲ್ಲಿರುತ್ತದೆ. ಇದರ ಫಲವಾಗಿ ಕೆಲವು ರಾಶಿಯವರಿಗೆ ಶುಭಫಲಗಳು ಮತ್ತು ಕೆಲವರಿಗೆ ಅಶುಭ ಫಲಗಳು ದೊರೆಯುತ್ತವೆ. ಹಾಗಾದ್ರೆ 2025ರಿಂದ 2027ರವರೆಗೆ ಶುಭ ಫಲ ಪಡೆಯವ ರಾಶಿಗಳ ಬಗ್ಗೆ ತಿಳಿಯಿರಿ.

ವೃಷಭ ರಾಶಿಯ 11ನೇ ಮನೆಯಲ್ಲಿ ಶನಿಗ್ರಹ ಸಾಗುತ್ತದೆ. ಇದರಿಂದ ಬಹುಕಾಲದ ನಿಮ್ಮ ಆಸೆಗಳು ಈಡೇರುತ್ತದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಯಶಸ್ಸು ನಿಮಗಾಗುತ್ತದೆ. ಕೆಲವೊಮ್ಮೆ ನೀವು ಮಾಡುತ್ತಿರುವ ಕೆಲಸದಿಂದ ಉತ್ತಮ ಬದಲಾವಣೆ ನೋಡುತ್ತೀರಿ. ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುವರು. ನಿಮ್ಮ ದಾಂಪತ್ಯದಲ್ಲಿ ಸುಖ-ಶಾಂತಿ, ನೆಮ್ಮದಿ ಇರಲಿದೆ. ನೀವು ಮಾಡುವ ಉತ್ತಮ ಕಾರ್ಯಗಳಿಗೆ ಅನುಸಾರ ಶನಿದೇವರು ಫಲ ನೀಡಲಿದ್ದಾರೆ. ನಿಮ್ಮ ಕೆಲಸದಲ್ಲಿ ಬಡ್ತಿ ಸಿಗಲಿದೆ. ಹೊಸ ಹೊಸ ಲಾಭದ ಮಾರ್ಗಗಳು ನಿಮ್ಮ ಕೈ ಹಿಡಿಯಲಿವೆ. ನೀವು ಅಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿವೆ.

ಮಿಥುನ ರಾಶಿಚಕ್ರದ ಹತ್ತನೇ ಮನೆಗೆ ಶನಿಯು 2025ರಲ್ಲಿ ಪ್ರಯಾಣಿಸಲಿದ್ದಾನೆ. ಇದು ನಿಮಗೆ ಉತ್ತಮ ಜೀವನ ನೀಡುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ. ಅನಾವಶ್ಯಕ ಖರ್ಚುಗಳಿಂದ ನೀವು ದೂರವಿರುತ್ತೀರಿ. ಸಂಸಾರದಲ್ಲಿ ಉಂಟಾಗಿದ್ದ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ದೊರೆಯುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಶನಿದೇವನ ಕೃಪೆಯಿಂದ ನೀವು ಎಲ್ಲಾ ರೀತಿ ಪ್ರಗತಿ ಪಡೆಯುತ್ತೀರಿ.  

ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ಶನಿ ಸಂಚರಿಸಲಿದೆ. 2025ರಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಸಂಭವಿಸುತ್ತವೆ. ಶನಿದೇವರ ಆಶೀರ್ವಾದಿಂದ ಹೊಸ ಮನೆ, ವಾಹನ ಖರೀದಿಗೆ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮ ದೈಹಿಕ ಆರೋಗ್ಯದಲ್ಲಿ ಮಾನಸಿಕ ತೊಂದರೆಗಳು ಎದುರಾಗಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link