Shani Uday 2021: ಮಕರ ರಾಶಿಯಲ್ಲಿ ಶನಿ ಉದಯ, ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ..!
ಮೇಷ : ಮೇಷ ರಾಶಿಯವರಿಗೆ ಶನಿಯ ಉದಯವು ಶುಭ ಫಲವನ್ನು ನೀಡುತ್ತದೆ. ಮೇಷ ರಾಶಿಯವರು ಆರ್ಥಿಕವಾಗಿ ಸದೃಢವಾಗಲಿದ್ದಾರೆ. ಸಾಲ ಮುಕ್ತರಾಗಲಿದ್ದಾರೆ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ವ್ಯಾಪಾರ ವರ್ಗದವರಿಗೂ ಲಾಭದಾಯಕವಾಗಿರಲಿದೆ.
ಕರ್ಕ -: ಶನಿಯ ಉದಯವು ಕರ್ಕ ರಾಶಿವರಿಗೂ ಲಾಭದಾಯಕವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಯಾವುದಾದದರೂ ಯೋಜನೆಗಳನ್ನು ಹಾಕಿಕೊಂಡಿದ್ದಲ್ಲಿ ಯಶಸ್ವಿಯಾಗುತ್ತವೆ, ಅವಕಾಶಗಳು ಸಿಗುತ್ತವೆ ಮತ್ತು ಗೌರವವೂ ಹೆಚ್ಚಾಗುತ್ತದೆ.
ಕನ್ಯಾರಾಶಿ : ಶನಿ ಎಚ್ಚರಗೊಳ್ಳುತ್ತಿದ್ದಂತೆ, ಕನ್ಯಾರಾಶಿಯವರ ಅದೃಷ್ಟವೂ ಎಚ್ಚರಗೊಳ್ಳಲಿದೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ, ಆದಾಯ ಹೆಚ್ಚಾಗುತ್ತದೆ.
ವೃಶ್ಚಿಕ : ವೃಶ್ಚಿಕ ರಾಶಿಯವರ ಆದಾಯ ಹೆಚ್ಚಾಗುತ್ತದೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಸುತ್ತದೆ. ಸಾಲದಿಂದ ಮುಕ್ತಿ ಸಿಗಲಿದೆ, ವ್ಯವಹಾರದಲ್ಲಿ ಲಾಭ ಇರುತ್ತದೆ.
ಮಕರ : ಮಕರ ರಾಶಿಯಲ್ಲಿಯೇ ಶನಿ ಉದಯವಾಗುತ್ತಿದ್ದು, ಈ ರಾಶಿಯವರಿಗೆ ಭಾರೀ ಶುಭಫಲವನ್ನು ನೀಡುತ್ತಾನೆ. ಹೊಸ ಅವಕಾಶಗಳು ಸಿಗಲಿವೆ. ಧನಲಾಭವಾಗಲಿದೆ. ಬಹಳ ಸಮಯದಿಂದ ನಿಂತು ಹೋಗಿದ್ದ ಕೆಲಸಗಳು ವೇಗಪಡೆದುಕೊಳ್ಳಲಿವೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ.
ಕುಂಭ : ಶನಿಯ ಉದಯವು ಕುಂಭ ರಾಶಿಯವರಿಗೂ ಶುಭ ಫಲಿತಾಂಶಗಳನ್ನು ತರಲಿದೆ. ಗೌರವ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಗತಿಯಾಗಲಿದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ವೃಷಭ ರಾಶಿ : ಶನಿಯ ಉದಯದೊಂದಿಗೆ, ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಖರ್ಚಿನ ಮೇಲೆ ಹಿಡಿತ ಸಾಧಿಸುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಹಣಕಾಸಿನ ತೊಂದರೆಗಳು ಎದುರಾಗಬಹುದು.
ಮಿಥುನ : ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಹದಗೆಡಬಹುದು. ವೆಚ್ಚಗಳು ಹೆಚ್ಚಾಗಬಹುದು, ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಮತ್ತು ಕುಟುಂಬದಲ್ಲಿ ತೊಂದರೆ ಎದುರಾಗಬಹುದು.
ಸಿಂಹ : ಕಷ್ಟದ ಸಂದರ್ಭಗಳ ಹೊರತಾಗಿಯೂ ಸ್ನೇಹಿತರು ಮತ್ತು ಕುಟುಂಬದಿಂದ ಸಹಾಯ ದೊರೆಯಲಿದೆ. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪ ಬಲಪಡಿಸುತ್ತದೆ
ತುಲಾ : ತುಲಾ ರಾಶಿಯವರು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾದಿತು. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಅನಗತ್ಯ ಚರ್ಚೆಗೆ ಇಳಿಯುವುದನ್ನು ತಪ್ಪಿಸಿಕೊಳ್ಳಿ. ಹಣಕಾಸಿನ ಸಮಸ್ಯೆ ಎದುರಾಗಬಹುದು.
ಧನು ರಾಶಿ : ಕಡಿಮೆ ಆದಾಯ ಮತ್ತು ಖರ್ಚುಗಳನ್ನು ಅಧಿಕವಾಗಿರುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಂಭವವೂ ಇದೆ.
ಮೀನ : ಮೀನ ರಾಶಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಂಗಾತಿಯ ಆರೋಗ್ಯದ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ. ಕಠಿಣ ಪರಿಶ್ರಮದಿಂದಾಗಿ, ಹಣವನ್ನು ಪಡೆಯಬಹುದು.