ವರ್ಷ 2024ರಲ್ಲಿ ಶನಿ ಉದಯ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
Shani Uday 2023:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 2024ರಲ್ಲಿ ಕರ್ಮ ಫಲದಾತ ಶನಿಯ ಉದಯ ನೆರವೇರಲಿದ್ದು, ಇದರಿಂದ ಮೂರು ಆಶಿಗಳ ಜನರ ಜೀವನದಲ್ಲಿ ಚಿನ್ನದಂತಹ ಕಾಲ ಆರಂಭಗೊಳ್ಳಲಿದೆ. (Spiritual News In Kannada)
ಮಿಥುನ ರಾಶಿ: ಶನಿ ನಿಮ್ಮ ಜಾತಕದ ನವಮ ಭಾವದಲ್ಲಿ ಉದಯಿಸಲಿದ್ದಾನೆ. ಇನ್ನೊಂದೆಡೆ ನಿಮ್ಮ ರಾಷ್ಯಾಧಿಪ ಬುಧನ ಜೊತೆಗೆ ಶನಿಯ ಸ್ನೇಹಭಾವದ ಸಂಬಂಧವಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಹಲವು ಕೆಲಸಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಹೊಸ ಕಾರ್ಯ ಆರಂಭಿಸಲು ಇದು ಸಕಾಲ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ಯಾತ್ರೆಗಳು ನಿಮ್ಮ ಪಾಲಿಗೆ ಶುಭ ಸಾಬೀತಾಗಲಿವೆ. ಶನಿ ನಿಮ್ಮ ಜಾತಕದ 8ನೇ ಮನೆಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಜಾತಕದ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಈ ಕಾಲ ಉತ್ತಮವಾಗಿದೆ.
ವೃಷಭ ರಾಶಿ: ಶನಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಉದಯಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ಬಿಸ್ನೆಸ್ ನಲ್ಲಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಹೂಡಿಕೆಗಾಗಿ ಯೋಚಿಸುತ್ತಿದ್ದರೆ, ಸಮಯ ಉತ್ತಮವಾಗಿದೆ. ನೌಕರಿಯಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿವೆ. ನಿಂತುಹೋದ ಕೆಲದಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ನೌಕರ ವರ್ಗದ ಜನರಿಗೆ ಮಾರ್ಚ್ ನಲ್ಲಿ ಪ್ರಮೋಷನ್ ಭಾಗ್ಯ, ಕೇಳಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಪ್ರಾಪ್ತಿಯಾಗಲಿದೆ. ಶನಿ ನಿಮ್ಮ ಜಾತಕದ ನವಮ ಭಾವಕ್ಕೆ ಅಧಿಪತಿಯಾಗಿರುವ ಕಾರಣ ಕೆಲಸದ ನಿಮಿತ್ತ ಸಣ್ಣಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆಗಳು ನಿಮಗೆ ಶುಭಫಲಗಳನ್ನು ನೀಡಲಿದೆ ಮತ್ತು ಅದೃಷ್ಟ ಕೂಡ ನಿಮ್ಮನ್ನು ಬೆಂಬಲಿಸಲಿದೆ.
ಮಕರ ರಾಶಿ: 2024ರ ಶನಿ ಉದಯ ನಿಮ್ಮ ಪಾಲಿಗೆ ಒಂದು ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ಶನಿ ನಿಮ್ಮ ಜಾತಕದ ಧನಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಕಾಲಕಾಲಕ್ಕೆ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿದೆ. ಇದರಿಂದ ನಿಮ್ಮ ಜೀವನದಲ್ಲಿ ಅಪಾರ ಹಣ ಹರಿದುಬಂದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶನಿ ದೇವನ ಕೃಪೆಯಿಂದ ನೌಕರಿಯಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಒದಗಿಬರಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ನಿಂತು ಹೋದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ಶನಿ ನಿಮ್ಮ ಜಾತಕದ ಅಧಿಪತಿಯಾದ ಕಾರಣ ಆತನ ಉದಯ ನಿಮಗೆ ಶನಿಯ ಉದಯ ಅವಧಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಶುಭ ಫಲಗಳು ಸಿಗಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)