Shani Vakri 2021: ಶನಿಯ ಹಿಮ್ಮುಖ ಚಲನೆ, ಈ 5 ರಾಶಿಯವರು ಎಚ್ಚರದಿಂದಿರಿ
ಮೇ 23, 2021 ಭಾನುವಾರ ಮಧ್ಯಾಹ್ನ 02.50 ನಿಮಿಷಕ್ಕೆ ಶನಿಯು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಿದ್ದಾರೆ. ಸುಮಾರು 5 ತಿಂಗಳುಗಳವರೆಗೆ, ಶನಿಯು ಅದೇ ಸ್ಥಾನದಲ್ಲಿ ಉಳಿಯುತ್ತದೆ ಮತ್ತು ನಂತರ ಅಕ್ಟೋಬರ್ 11, 2021 ರಂದು ಶನಿ ಮತ್ತೆ ತಿರುಗುತ್ತದೆ ಅಥವಾ ಸರಾಗವಾಗಿ ಚಲಿಸುತ್ತದೆ. ಈ ವರ್ಷ 2021 ರಲ್ಲಿ ಶನಿಯು ಯಾವುದೇ ರಾಶಿಚಕ್ರವನ್ನು ಬದಲಾಯಿಸುವುದಿಲ್ಲ. ಏಕೆಂದರೆ ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಚಕ್ರದಲ್ಲಿ ಚಲಿಸುತ್ತದೆ.
ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿ ಮತ್ತು ಮಿಥುನ ರಾಶಿ, ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯ ಮೇಲೆ ಶನಿಯ ಸಾಡೇ ಸಾತಿ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಈ 5 ರಾಶಿಯವರು ಶನಿಯ ಹಿಮ್ಮುಖ ಚಲನೆಯ ಸಮಯದಲ್ಲಿ ಅವರು ಹೆಚ್ಚು ಜಾಗರೂಕರಾಗಿರಬೇಕು.
ಶನಿಯ ಸಾಡೇ ಸಾತಿ ಬಗ್ಗೆ ಹೇಳುವುದಾದರೆ, ಇದು 3 ಹಂತಗಳನ್ನು ಹೊಂದಿದೆ. ಇದರ ಕೊನೆಯ ಹಂತವು ಧನು ರಾಶಿ ಮೇಲೆ ನಡೆಯುತ್ತಿದೆ, ಶನಿಯ ಸಾಡೇ ಸತಿಯ ಎರಡನೇ ಹಂತವು ಮಕರ ರಾಶಿಯ ಮೇಲೆ ಮತ್ತು ಮೊದಲ ಹಂತವು ಕುಂಭ ರಾಶಿಯಲ್ಲಿ ಹೆಚ್ಚು ಪ್ರಭಾವ ಬೀರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಮೂರು ರಾಶಿಯವರು ಶನಿಯ ಹಿಮ್ಮುಖ ಚಲನೆಯ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು ಮತ್ತು ಯಾವುದರ ಮೇಲಾದರೂ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು.
ಇದನ್ನೂ ಓದಿ - ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ
ಶನಿಯ ಹಿಮ್ಮುಖ ಚಲನೆಯು ಮಿಥುನ ರಾಶಿ ಮತ್ತು ತುಲಾ ರಾಶಿಯ ಮೇಲೂ ತನ್ನ ಪ್ರಭಾವ ಬೀರಲಿದೆ. ಈ ಎರಡು ರಾಶಿಚಕ್ರದ ಜನರು ಸಹ ಈ ಸಂದರ್ಭದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ - Shukra Uday 2021: ಮೇಷ ರಾಶಿಯಲ್ಲಿ ಶುಕ್ರನ ಉದಯ, ಯಾವ ರಾಶಿಗಳಿಗೆ ತರಲಿದೆ ಅದೃಷ್ಟ
ಶನಿ ದೇವರನ್ನು ಮೆಚ್ಚಿಸಲು ಮತ್ತು ಅವರ ಕೋಪವನ್ನು ತಪ್ಪಿಸಲು, ಮೊದಲನೆಯದಾಗಿ, ನಿಮ್ಮ ಕಾರ್ಯಗಳನ್ನು ಸುಧಾರಿಸಿ. ಯಾವುದೇ ತಪ್ಪು ಮಾಡಬೇಡಿ. ಹನುಮನನ್ನು ಭಕ್ತಿಯಿಂದ ಪೂಜಿಸಿ. ಹನುಮಾನ್ ಚಾಲಿಸಾ ಪಠಿಸಿ. ಶಿವನ ಆರಾಧನೆಯಿಂದ ಕೂಡ ಶನಿ ದೇವ ಸಂತಸಗೊಳ್ಳುತ್ತಾನೆ. ಶನಿ ಮಂತ್ರಗಳನ್ನು ಪಠಿಸಿ, ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ, ಹಿರಿಯರನ್ನು ಗೌರವಿಸಿ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)