Shani Vakri 2024: ಶನಿ ವಕ್ರಿಯಿಂದ ಈ 5 ರಾಶಿಯವರಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ!
ಮಿಥುನ ರಾಶಿಗೆ ಶನಿಯು ೮ ಮತ್ತು ೯ನೇ ಮನೆಯ ಅಧಿಪತಿ ಆಗುತ್ತದೆ. ಈ ಕಾರಣದಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದರೆ ಯಾವುದೇ ಕಾರಣಕ್ಕೂ ದುಡುಕುತನದ ನಿರ್ಧಾರ ತೆಗೆದುಕೊಳ್ಳಬಾರದು. ಬೇರೆಯವರ ಮಾತು ನಂಬಿದರೆ ಜೀವನದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ, ಆಹಾರದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ, ಆದರೆ ತಂದೆಗೆ ಅನಾರೋಗ್ಯ ಉಂಟಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ತೊಂದರೆ ಉಂಟಾಗಬಹುದು. ವ್ಯಾಪಾರ-ವ್ಯವಹಾರದ ಬದಲು ಕುಟುಂಬದ ಸದಸ್ಯರ ಸಹಾಯ ಸಹಕಾರ ಪಡೆಯುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಬೇಕು.
ಕಟಕ ರಾಶಿಗೆ ಶನಿಯು 7 ಮತ್ತು 8ನೇ ಮನೆಯ ಅಧಿಪತಿ ಆಗುತ್ತದೆ. ಶನಿಯು ಕುಂಭದಲ್ಲಿ ವಕ್ರಿಯಾದಾಗ ಈ ರಾಶಿಯವರ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಪಾಲುದಾರಿಕೆಯ ವ್ಯಾಪಾರ-ವ್ಯವಹಾರದಲ್ಲಿ ಅನಿರೀಕ್ಷಿತ ಹಿನ್ನಡೆ ಉಂಟಾಗುತ್ತದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸುವ ಬದಲಾಗಿ ಸನ್ನಿವೇಶಕ್ಕೆ ಹೊಂದಿಕೊಂಡು ನಡೆಯಬೇಕಾಗುತ್ತದೆ. ದುಡುಕುತನದ ಮಾತಿನಿಂದ ಸ್ನೇಹ ಕಳೆದುಕೊಳ್ಳಬೇಕಾಗುತ್ತದೆ. ತಾಳ್ಮೆಯಿಂದ ಮಾತ್ರ ನಿಮ್ಮ ಜೀವನ ಸರಿಯಾದ ಹಾದಿಯಲ್ಲಿ ನಡೆಯುತ್ತದೆ. ಹಿರಿಯ ಸೋದರ ಅಥವಾ ಸೋದರಿಯ ಜೊತೆ ಅನಾವಶ್ಯಕ ವಾದ-ವಿವಾದ ಎದುರಾಗಲಿದೆ. ಹೀಗಾಗಿ ಪ್ರೀತಿ ವಿಶ್ವಾಸದಿಂದ ವರ್ತಿಸುವುದು ಉತ್ತಮ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ನಿಮಗೆ ಹಲವು ಶುಭಫಲಗಳು ದೊರೆಯುತ್ತವೆ.
ವೃಶ್ಚಿಕ ರಾಶಿಗೆ ಶನಿಯು ೩ ಮತ್ತು ೪ನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದ ಸೋಲಿಗೆ ಹೆದರದೆ ಹಟದಿಂದ ಕೆಲಸ ಕಾರ್ಯ ನಿರ್ವಹಿಸುವಿರಿ. ಈ ಕಾರಣದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸೋದರರ ನಡುವೆ ಉತ್ತಮ ಅನುಬಂಧ ಇರುವುದಿಲ್ಲ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಕುಟುಂಬಕ್ಕೆ ಸೇರಿದ ಭೂ ವಿವಾದಕ್ಕೆ ಪರಿಹಾರ ದೊರೆಯದೆ ಮುಂದುವರೆಯುತ್ತದೆ. ನಿಮ್ಮ ಉತ್ತಮ ಪ್ರಯತ್ನಕ್ಕೆ ತಕ್ಕಂತೆ ಫಲಗಳು ದೊರೆಯುತ್ತವೆ. ಯಾವುದೇ ಕೆಲಸ ಆರಂಭಿಸುವ ಮೊದಲು ಆತ್ಮೀಯರ ಸಲಹೆ ಕೇಳುವುದು ಒಳ್ಳೆಯದು. ಅನಿವಾರ್ಯವಾಗಿ ವಾಸ ಸ್ಥಳ ಬದಲಿಸಬೇಕಾಗುತ್ತದೆ. ಒಟ್ಟಾರೆ ನೇರ ನಡೆ ನುಡಿ ಮತ್ತು ಹಟದಿಂದ ಹೊರ ಬರುವುದು ಉತ್ತಮ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಡವಾಗಿ ಜಯ ಲಭಿಸುತ್ತದೆ.
ಧನು ರಾಶಿಯಲ್ಲಿ ಜನಿಸಿದವರಿಗೆ ಶನಿಯು ೨ ಮತ್ತು ೩ನೇ ಮನೆಯ ಅಧಿಪತಿಯಾಗುತ್ತಾನೆ. ಇದರಿಂದ ಕಷ್ಟವೆನಿಸುವ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿಮ್ಮ ತಪ್ಪು ನಿರ್ಧಾರಗಳಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಮಾತಿನ ಮೇಲೆ ನಿಯಂತ್ರಣವಿದ್ದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರ ಅನಾವಶ್ಯಕವಾಗಿ ಬದಲಿಸುತ್ತೀರಿ. ಇದರಿಂದ ಕೆಲಸ ಕಾರ್ಯಗಳು ಸುಲಭವಾಗಿ ಮುಂದುವರೆಯುವುದಿಲ್ಲ. ಕುಟುಂಬದಲ್ಲಿ ಅನಾವಶ್ಯಕ ವಾದ-ವಿವಾದಗಳು ತಲೆದೋರುತ್ತವೆ. ನಿಮ್ಮ ಮನಸ್ಸಿನಲ್ಲಿರುವ ಒಳ್ಳೆಯ ಭಾವನೆಗಳಿಗೆ ಬೇರೆಯವರ ಸಹಮತ ಇರುತ್ತದೆ. ಆದರೆ ಅದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಂಡರೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮಿತಿಮೀರಿ ಹಣ ಖರ್ಚು ಮಾಡಬೇಡಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಹೊಂದಿಕೊಂಡು ನಡೆದರೆ ಯಾವುದೇ ತೊಂದರೆಯಿರಲ್ಲ.
ಶನಿಯು ಕುಂಭ ರಾಶಿಗೆ ಅಧಿಪತಿ ಆಗುತ್ತಾನೆ. ಅಲ್ಲದೆ ೧೨ನೇ ಮನೆಯ ಅಧಿಪತಿಯು ಆಗುತ್ತಾನೆ. ಈ ಕಾರಣದಿಂದ ಕುಂಭದಲ್ಲಿ ಶನಿಯು ವಕ್ರಿ ಆದಾಗ ಅನಾವಶ್ಯಕ ಖರ್ಚು ವೆಚ್ಚಗಳು ಹೆಚ್ಚುತ್ತವೆ. ನಿಮ್ಮ ಮಾತುಕತೆ ಸರಿ ಇದ್ದರೂ ಅದು ಬೇರೆಯವರಿಗೆ ಅರ್ಥವಾಗುವುದಿಲ್ಲ. ನಿಮ್ಮಲ್ಲಿರುವ ಬುದ್ಧಿವಂತಿಕೆಯಾಗಲಿ ಬೇರೆಯವರು ಗಮನಿಸುವುದಿಲ್ಲ. ಇದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಏಕಾಂಗಿತನ ನಿಮ್ಮನ್ನು ಕಾಡುತ್ತದೆ. ಕಣ್ಣಿನ ತೊಂದರೆ ಉಂಟಾಗುತ್ತದೆ. ಪ್ರಯೋಜನವಲ್ಲದ ತಿರುಗಾಟಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವಿರಿ. ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ಹೋದಲ್ಲಿ ಕೂಡಿಟ್ಟ ಹಣ ಖರ್ಚಾಗುತ್ತದೆ. ನಿಮ್ಮ ಅವಶ್ಯಕತೆಗಳನ್ನು ಮನಬಿಚ್ಚಿ ಬೇರೆಯವರಿಗೆ ತಿಳಿಸುವುದು ಒಳ್ಳೆಯದು.