Shani Vakri: ಅಕ್ಟೋಬರ್ 23ರವರೆಗೆ ಈ ರಾಶಿಯವರಿಗೆ ಕಷ್ಟದ ಸಮಯ

Tue, 07 Jun 2022-12:42 pm,

ಮೇಷ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯು ಒಳ್ಳೆಯ ಲಾಭದಾಯಕವಾಗಿದೆ. ಈ ರಾಶಿಯವರು ಅಗತ್ಯವಿರುವವರಿಗೆ ದಾನ ಮಾಡಿದರೆ ಲಾಭದಾಯಕ.

ವೃಷಭ ರಾಶಿಯವರಿಗೆ ಈ ಸಮಯದಲ್ಲಿ ಆತುರದ ನಿರ್ಧಾರಗಳು ಭಾರೀ ನಷ್ಟವನ್ನು ಉಂಟು ಮಾಡಬಹುದು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಗರೂಕರಾಗಿರಿ. ಕೋಪ ಮತ್ತು ಮಾತಿನ ಮೇಲೆ ಸಂಯಮ ಇರಲಿ.

ಮಿಥುನ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ. 

ಶನಿಯ ಹಿಮ್ಮುಖ ಚಲನೆಯು ಕಟಕ ರಾಶಿಯವರ  ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸತತ ಏಳು ಶನಿವಾರಗಳು ಓಂ ಸುಂ ಸನೈಚರಾಯ ನಮ: ಎಂಬ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯದೇ ಆಗುತ್ತದೆ.

ಸಿಂಹ ರಾಶಿಯವರಿಗೂ ಇದು ಕಷ್ಟಕರ ಸಮಯ. ಆದರೆ, ಪ್ರತಿನಿತ್ಯ ಓಂ ಸುಂ ಶನೈಚರಾಯ ನಮಃ ಎಂಬ ಮಂತ್ರವನ್ನು  ಜಪಿಸಿದರೆ ಒಳ್ಳೆಯದೇ ಆಗುತ್ತದೆ.

ಕನ್ಯಾ ರಾಶಿಯವರಿಗೂ ಅಕ್ಟೋಬರ್ ಕೊನೆಯ ವಾರದವರೆಗಿನ ಸಮಯ ಹಲವು ಸಂಕಷ್ಟಗಳನ್ನು ತೊಂದೊಡ್ದುತ್ತದೆ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಪಠಿಸಿದರೆ ಸ್ವಲ್ಪ ಪರಿಹಾರ ದೊರೆಯಬಹುದು. 

ಹಳೆಯ ಯೋಜನೆಗಳನ್ನು ಪುನರಾರಂಭಿಸಬಹುದು. ಇದರೊಂದಿಗೆ ನೀವು ಭೂಮಿ, ಮನೆ ಇತ್ಯಾದಿಗಳನ್ನು ಖರೀದಿಸಲು ಬಯಸಿದರೆ ಅದಕ್ಕೆ ಅವಕಾಶಗಳು ಸೃಷ್ಟಿಯಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ವೃಶ್ಚಿಕ ರಾಶಿಯವರಿಗೆ ಈ ಸಮಯದಲ್ಲಿ ನಿಮಗೆ ಜೀವನದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಹಣ ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ವಿವಾದಗಳು ಉಂಟಾಗಬಹುದು.

ಧನು ರಾಶಿಯವರಿಗೆ ಶನಿಯ ವಕ್ರತೆಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸಿನ ಅವಕಾಶವಿದೆ. ನೀವು ಆದಾಯ ಗಳಿಸುವ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗಿ ಹೆಚ್ಚಿನ ಯಶಸ್ಸು ಬರಲು ಪ್ರಾರಂಭಿಸುತ್ತದೆ.  

ಮಕರ ರಾಶಿಯ ಅಧಿಪತಿ ಶನಿ. ಶನಿಯ ಹಿಮ್ಮುಖ ಚಲನೆಯು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಆದಾಗ್ಯೂ, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರುವುದು ಅಗತ್ಯ. 

ಕುಂಭ ರಾಶಿಯವರಿಗೆ ಶನಿಯ ಸಾಡೇ ಸಾತಿ ಪ್ರಭಾವ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ಹಿನ್ನಡೆಯಿಂದ ಆರ್ಥಿಕ ನಷ್ಟ ಉಂಟಾಗಬಹುದು.

ಮೀನ ರಾಶಿಯವರಿಗೆ ಶನಿಯ ಹಿಮ್ಮುಖ ಸಂಚಾರದ ಸಮಯದಲ್ಲಿ ಹೆಚ್ಚಿನ ಹಣದ ಹರಿವು ಇರುತ್ತದೆ. ವೃತ್ತಿ ಬದಲಾವಣೆ ಸಾಧ್ಯತೆ ಇದೆ. ವಿಶೇಷ ಪ್ರಯೋಜನವನ್ನು ಪಡೆಯಲು ದಾನ ಮಾಡಿ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link