Shani Vakri: ಈ ರಾಶಿಯವರಿಗೆ ಶನಿ ದಯೆ, ಬಂಪರ್ ಹಣದ ಜೊತೆಗೆ ಪ್ರಗತಿಯೂ ಸಿಗುತ್ತೆ

Mon, 17 Jul 2023-1:16 pm,

ನ್ಯಾಯದ ದೇವರು ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ತನ್ನ ವಕ್ರ ಚಲನೆಯನ್ನು ಆರಂಭಿಸಿದ್ದಾನೆ. ಶನಿ ದೇವನ ಈ ವಕ್ರ ನಡೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.

ಈ ಸಮಯದಲ್ಲಿ ಶನಿ ವಕ್ರ ನಡೆಯು ಮೂರು ರಾಶಿಯವರ ಜೀವನದ ಮೇಲೆ ಅಪಾರ ದಯೆ ತೋರಲಿದೆ. ಈ ಸಮಯದಲ್ಲಿ ಅವರು ಬಂಪರ್ ಹಣಕಾಸಿನ ಲಾಭವನ್ನು ಗಳಿಸುವುದರ ಜೊತೆಗೆ ಜೀವನದಲ್ಲಿ ಪ್ರಗತಿಯನ್ನೂ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ. 

ಶನಿಯ ವಕ್ರ ನಡೆ ವೃಷಭ ರಾಶಿಯವರಿಗೆ ತುಂಬಾ ಫಲಪ್ರದವಾಗಿದೆ. ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಸಮಯ ಉತ್ತಮವಾಗಿದ್ದು ಉನ್ನತ ಪದವಿಯನ್ನು ಅಲಂಕರಿಸುವ ಯೋಗವಿದೆ. ವ್ಯಾಪಾರಸ್ಥರಿಗೆ ಭರ್ಜರಿ ಲಾಭ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿಂಹ ರಾಶಿಯವರಿಗೂ ಕೂಡ ಶನಿಯ ಹಿಮ್ಮುಖ ಚಾಲನೆ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗಲಿದ್ದು, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನೀವು ದೀರ್ಘ ಸಮಯದಿಂದ ಕಾಯುತ್ತಿದ್ದ ಬಡ್ತಿ ಪ್ರಯೋಜನವೂ ಲಭ್ಯವಾಗಲಿದೆ. ಇದಲ್ಲದೆ, ನಿಮ್ಮಿಷ್ಟದ ಜಾಗಕ್ಕೆ ವರ್ಗಾವಣೆಯೂ ಆಗಲಿದೆ. 

ಶನಿ ದೇವನ ಹಿಮ್ಮುಖ ಚಲನೆಯು  ಮಕರ ರಾಶಿಯವರಿಗೆ ಧನಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ದಿಢೀರ್ ಹಣಕಾಸಿನ ಲಾಭವಾಗಲಿದ್ದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೀವು ಬಯಸಿದ ಉದ್ಯೋಗ ಲಭ್ಯವಾಗಲಿದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link