ಈ ರಾಶಿಗಳಿಗೆ ರಾಜಯೋಗ ಕರುಣಿಸಲಿದ್ದಾನೆ ಶನಿ ಮಹಾತ್ಮ ! ಕಷ್ಟ ಸೋಕದಂತೆ ಸುಖದ ಸುಪ್ಪತ್ತಿಗೆಯಲ್ಲಿಯೇ ಮುನ್ನಡೆಸುವನು
ಅಧಿಪತಿ ಶನಿ: ಅತ್ಯಂತ ಪ್ರಮುಖ ಗ್ರಹ ಶನಿಯು ಪ್ರತಿ ರಾಶಿಯಲ್ಲಿ ದೀರ್ಘಕಾಲ ಉಳಿಯುತ್ತಾನೆ ಈ ಮೂಲಕ ಹೆಚ್ಚಿನ ಪ್ರಭಾವವನ್ನು ಬೀರುತ್ತಾನೆ.
ಹೆಚ್ಚಿನ ಪರಿಣಾಮ: ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಆದ್ದರಿಂದ, ರಾಶಿಯ ಮೇಲೆ ಅವನ ಪ್ರಭಾವವು ಇತರ ಗ್ರಹಗಳಿಗಿಂತ ಹೆಚ್ಚು.
ಹೆಚ್ಚು ಶಕ್ತಿಶಾಲಿಯಾಗುವನು : ಜೂನ್ 17, 2023 ರಿಂದ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ಸ್ಥಿತಿಯಲ್ಲಿದ್ದಾನೆ. ನಿನ್ನೆಯಿಂದ ಶನಿಯು ಹೆಚ್ಚು ಬಲದೊಂದಿಗೆ ಓಡಾಡುತ್ತಿದ್ದಾನೆ.
ರಾಶಿಗಳ ಮೇಲೆ ಪ್ರಭಾವ: ಶನಿಯ ಬಲವು ಹೆಚ್ಚಾದಂತೆ, ಎಲ್ಲಾ ರಾಶಿಗಳ ಜೀವನದ ಮೇಲೆ ಅದರ ಪ್ರಭಾವವು ಹೆಚ್ಚಾಗುತ್ತದೆ. ಶಕ್ತಿಶಾಲಿ ಶನಿಯು 4 ರಾಶಿಯವರಿಗೆ ಹೆಚ್ಚು ಶುಭ ಫಲ ಕರುಣಿಸಲಿದ್ದಾನೆ. ಈ ರಾಶಿಯವರು ಶನಿಯ ಕೃಪೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ.
ವೃಷಭ ರಾಶಿ : ಶನಿಯ ಪ್ರಭಾವದಿಂದ ವೃಷಭ ರಾಶಿಯವರಿಗೆ ಜೀವನದಲ್ಲಿ ಶುಭ ದಿನಗಳು ಆರಂಭವಾಗಲಿವೆ. ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಇವರ ಪರವಾಗಿಯೇ ಇರುತ್ತದೆ. ನೀವು ಕೆಲಸದಲ್ಲಿರಲಿ ಅಥವಾ ವ್ಯವಹಾರದಲ್ಲಿರಲಿ, ಯಶಸ್ಸು ನಿಮ್ಮದೇ. ಒಂದರ ಹಿಂದೆ ಒಂದರಂತೆ ಹಲವು ಶುಭ ಸುದ್ದಿಗಳು ತೇಲಿ ಬರಲಿವೆ.
ಮಿಥುನ ರಾಶಿ : ಮಿಥುನ ರಾಶಿಯವರ ಮೇಲೆ ಶನಿದೇವರ ಕೃಪಾ ಕಟಾಕ್ಷ ಹರಿಯುತ್ತಿದೆ. ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ. ಶೀಘ್ರದಲ್ಲೇ ದೊಡ್ಡ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಕರ್ಕಾಟಕ ರಾಶಿ : ಶನಿಯ ವಕ್ರ ನಡೆ ಕರ್ಕ ರಾಶಿಯವರ ಜೀವನದಲ್ಲಿ ಉತ್ತಮ ಆರಂಭವನ್ನು ನೀಡುತ್ತದೆ. ವ್ಯಾಪಾರದಲ್ಲಿ ಪ್ರಗತಿಯಾಗುವುದು. ಮುನ್ನಡೆಯುವ ಹಾದಿ ಸುಗಮವಾಗಿರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ತುಲಾ ರಾಶಿ : ಶನಿಯ ಸಂಚಾರವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವಿವಾದಾತ್ಮಕ ವಿಷಯದಲ್ಲೂ ನೀವು ಗೆಲ್ಲುತ್ತೀರಿ. ಶತ್ರುಗಳಿಗೆ ಸೋಲಾಗುವುದು. ಇಲ್ಲಿಯವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುವುದು.