ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು, ಪರೀಕ್ಷೆ ಮಾಡಿಸಿದಾಗ ʼಕ್ಯಾನ್ಸರ್ʼ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಾನ್ವಿ
ಸಾನ್ವಿ ಶ್ರೀವಾಸ್ತವ್, ಕನ್ನಡ ಭರವಸೆಯ ನಟಿಯರಲ್ಲಿ ಒಬ್ಬರು.. ತಮ್ಮ ಮುಗ್ದ ನಗು, ಸೌಂದರ್ಯ, ನಟನೆಯ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದ ಚೆಲುವೆ ಈಕೆ. ತೆಲುಗು ಸಿನಿಮಾ ಲವ್ಲಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ, ಅಡ್ಡಾ ಮೂಲಕ ಕನ್ನಡ ಚಿತ್ರಲೋಕಕ್ಕೆ ಪಾದಾರ್ಪಾಣೆ ಮಾಡಿದರು.
ಲವ್ಲಿ ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದ ನಾಯಕಿ ಸಾನ್ವಿ ಶ್ರೀವಾಸ್ತವ್. ಯಂಗ್ ಹೀರೋ ಆದಿ ಸಾಯಿಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ 2012ರಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆದರೆ ಸಾನ್ವಿಗೆ ಟಾಲಿವುಡ್‌ನಲ್ಲಿ ನಿರೀಕ್ಷೆಯಷ್ಟು ಆಫರ್‌ಗಳು ಬರಲಿಲ್ಲ.
ಆದರೆ ಈ ಚೆಲುವೆಗೆ ಕನ್ನಡದಲ್ಲಿ ಒಳ್ಳೆ ಆಫರ್‌ಗಳು ಬಂದವು. ಯಶ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿಯಂತಹ ಮುಂತಾದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಮರಾಠಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಕನ್ನಡ, ತೆಲುಗು, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸಾನ್ವಿ, ಸಾಕಷ್ಟು ಗ್ಯಾಪ್ ನಂತರ ಸಿನಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ Rapid ಜೊತೆಗಿನ ಸಂದರ್ಶನದಲ್ಲಿ ನಟಿ ತಮ್ಮ ಜೀವನದಲ್ಲಿ ಎದುರಿಸಿದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಡಿಸೆಂಬರ್ 8 ಸಾನ್ವಿ ಶ್ರೀವಾಸ್ತವ್ ಅವರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಡಿಸೆಂಬರ್ 9 ರಂದು ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಇದರಿಂದ ಆಕೆಯ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷಿಸಿದ ವೈದ್ಯರು ಕೂಡಲೇ ಎಂಆರ್ ಐ ಹಾಗೂ ಕ್ಯಾನ್ಸರ್ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದರಂತೆ.
ಇನ್ನು ಕ್ಯಾನ್ಸರ್ ಪರೀಕ್ಷೆಯಿಂದ ಮನಸ್ಸು ವಿಚಲಿತರಾದ ನಟಿ, ತಮಗೆ. ಕ್ಯಾನ್ಸರ್ ಆಗಿದೇಯೇ ಅಂತ ಶಾಕ್‌ಗೆ ಒಳಗಾಗಿದ್ದರು. ಅಲ್ಲದೆ, ಆ ನೋವು, ಸರಣಿ ಆಪರೇಷನ್, ಕೀಮೋಥೆರಪಿಯಿಂದ ಅಸಹನೀಯ ನೋವು, ಕೂದಲು ಉದುರುವುದು ಹೀಗೆ ಎಲ್ಲ ಸಮಸ್ಯೆಗಳೂ ಕ್ಷಣಮಾತ್ರದಲ್ಲಿ ಸಾನ್ವಿ ಕಣ್ಮುಂದೆ ಬಂದವು.
ಆ ನಂತರ ಪರೀಕ್ಷೆಯ ವರದಿಗಳಲ್ಲಿ ಕ್ಯಾನ್ಸರ್ ಅಲ್ಲ ಅಂತ ಬಂದಿದ್ದು ನೋಡಿ ಸಮಾಧಾನವಾಯಿತು. ಅಂಡಾಶಯದಲ್ಲಿ ಚೀಲಗಳು ಉಂಟಾಗಿದ್ದವು, ಅವುಗಳಲ್ಲಿ ಕೆಲವು ಒಡೆದು ಅಂಡಾಶಯಗಳು ಸಹ ಹಾನಿಗೊಳಗಾಗಿದ್ದವು. ದೀರ್ಘ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದರು ಎಂದು ನಟಿ ನೆನಪಿಸಿಕೊಂಡರು.
ಡಿಸೆಂಬರ್‌ನಿಂದ ಆ್ಯಂಟಿಬಯೋಟಿಕ್ಸ್ ಮತ್ತು ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಕೆಲವು ಬಗೆಯ ಔಷಧಿಗಳೂ ಅಡ್ಡ ಪರಿಣಾಮ ಬೀರುತ್ತವೆ.. ಕಳೆದ ನಾಲ್ಕು ತಿಂಗಳಿಂದ ಶ್ವಾಸಕ್ಕೆ ಸಂಬಂಧಿಸಿದ ವ್ಯಾಯಾಮಗಳತ್ತ ಗಮನ ಹರಿಸುತ್ತಿದ್ದೇನೆ ಎಂದು ನಟಿ ಸಾನ್ವಿ ತಾವು ಅನುಭವಿಸಿದ ಆರೋಗ್ಯ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದಾರೆ..