Shardiya Navratri 2022: ನವರಾತ್ರಿಯಲ್ಲಿ ಲಕ್ಷ್ಮಿದೇವಿ ಕೃಪೆಗೆ ಈ ಕೆಲಸ ಮಾಡಿ, ಕೋಟ್ಯಧಿಪತಿಯಾಗುತ್ತೀರಿ!
ನವರಾತ್ರಿಯಲ್ಲಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಲಕ್ಷ್ಮಿದೇವಿಯ ಚಿತ್ರವಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಮನೆಗೆ ತಂದು ಅದನ್ನು ಪ್ರತಿದಿನ ಪೂಜಿಸಬೇಕು. ಹೀಗೆ ಮಾಡುವುದರಿಂದ ಅಪಾರ ಸಂಪತ್ತು ಸಿಗುತ್ತದೆ ಎಂಬುದು ನಂಬಿಕೆಯಾಗಿದೆ.
ನವರಾತ್ರಿಯ ಸಮಯದಲ್ಲಿ ತಾಯಿ ದುರ್ಗೆಯ ಜೊತೆಗೆ ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಬೇಕು. ಪೂಜಾ ಸಮಯದಲ್ಲಿ ಕಮಲದ ಹೂವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ದುರಾದೃಷ್ಟವೂ ಅದೃಷ್ಟವಾಗಿ ಮಾರ್ಪಡುತ್ತದೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದವು ನಿಮಗೆ ದೊರೆಯುತ್ತದೆ.
ನವರಾತ್ರಿಯ ಮೊದಲ ದಿನ ಶಂಖಪುಷ್ಪಿಯ ಬೇರನ್ನು ಮನೆಗೆ ತಂದು ಶುಭ ಮುಹೂರ್ತದಲ್ಲಿ ಪೂಜಿಸಿದ ನಂತರ ಬೆಳ್ಳಿಯ ಪೆಟ್ಟಿಗೆಯಲ್ಲಿಟ್ಟು ಕಮಾನಿನಲ್ಲಿ ಇಡಿ. ಈ ರೀತಿ ಮಾಡುವುದರಿಂದ ನಿಮ್ಮ ಮನೆ ಸಂಪತ್ತಿನಿಂದ ತುಂಬಿರುತ್ತದೆ. ನಿಮಗೆ ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ.
ನವರಾತ್ರಿಯ 9 ದಿನಗಳಲ್ಲಿ ಮನೆಯಲ್ಲಿ ಬಾಳೆ ಗಿಡ ನೆಡಬೇಕು. ನಂತರ ಪ್ರತಿ ಗುರುವಾರ ಅದರಲ್ಲಿ ಹಾಲು ಬೆರೆಸಿದ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯ ಜೊತೆಗೆ ಭಗವಾನ್ ವಿಷ್ಣುವು ಸಹ ಪ್ರಸನ್ನನಾಗುತ್ತಾನೆ ಮತ್ತು ಅಪಾರ ಸಂಪತ್ತನ್ನು ನೀಡುತ್ತಾನೆ.
ನವರಾತ್ರಿಯಲ್ಲಿ ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಆಲದ ಮರದ ಎಲೆಗಳ ಮೇಲೆ ಸಿಂಧೂರ ಅಥವಾ ಅರಿಶಿನದಿಂದ ಸ್ವಸ್ತಿಕ ಚಿಹ್ನೆಯನ್ನು ಮಾಡಿ. ನಂತರ ಲಕ್ಷ್ಮಿದೇವಿಯ ಪೂಜೆಯಲ್ಲಿ ಈ ಎಲೆಗಳನ್ನು ಅರ್ಪಿಸಿ. ಇದರಿಂದ ಸಂತಸಗೊಂಡ ಲಕ್ಷ್ಮಿಯು ನಿಮಗೆ ಸಾಕಷ್ಟು ಹಣವನ್ನು ನೀಡುತ್ತಾಳೆ.