ಶಾಲೆಗೆ ಹೋಗಲು ತಮ್ಮ ಮಗನಿಗೆ ಕೋಟಿ ಕೋಟಿ ಬೆಲೆ ಬಾಳುವ ಕಾರು ಗಿಫ್ಟ್‌ ಮಾಡಿದ ಶಾರುಕ್‌ ಖಾನ್‌..! ಈ ವಾಹನದ ನಿಜವಾದ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ

Fri, 25 Oct 2024-11:47 am,

Sharukh Khan expensive gift: ಬಾಲಿವುಡ್‌ ಅನ್ನು ಆಳುತ್ತಿರುವ ಸ್ಟಾರ್‌ ನಟರಲ್ಲಿ ನಟ ಶಾರುಖ್‌ ಖಾನ್‌ ಕೂಡ ಒಬ್ಬರು. ಈತ ಬಾಲಿವುಡ್‌ನ ಒಬ್ಬ ಶ್ರೀಮಂತ ವ್ಯಕ್ತಿ ಎಂದೆ ಹೇಲಬಹುದು. ನಟ ತನ್ನ ಆಸ್ತಿಯ ನಿವ್ವಳ ಮೌಲ್ಯದ ಕಾರಣದಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ನಟ ತಮ್ಮ ಕಿರಿಯ ಮಗನಿಗೆ ಶಾಲೆಗೆ ಹೋಗಲು ಕೋಟಿ ಕೋಟಿ ಬೆಲೆ ಬಾಳುವ ಕಾರು ಗಿಫ್ಟ್‌ ಮಾಡಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ.   

ಬಾಲಿವುಡ್‌ನ ಕಿಂಗ್‌ ಎಂದೆ ಕರೆಸಿಕೊಳ್ಳುವ ಶಾರುಕ್‌ ಖಾನ್‌ ಇಂಡಸ್ಟ್ರಿಗೆ ಕಾಲಿಟ್ಟಾಗಿನಿಂದಲೂ ಶ್ರಮಿಸಿ ಇಂದು ಟಾಪ್‌ ನಟರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. ಇಂಡಸ್ಟ್ರಿಯಲ್ಲಿ ಅಷ್ಟೆ ಅಲ್ಲದೆ ಕೋಟಿ ಕೋಟಿ ಜನರ ಹೃದಯಲ್ಲಿ ಕೂಡ ಸ್ಟಾರ್‌ ನಟ ಶಾರುಖ್‌ ಖಾನ್‌ ಸ್ಥಾನ ಪಡೆದುಕೊಂಡಿದ್ದಾರೆ.   

ಶಾರುಖ್‌ ಖಾನ್‌ ಅತಿಯಾಗಿ ಪ್ರೀತಿಸುವವರಲ್ಲಿ ತಮ್ಮ ಮೂರು ಮಕ್ಕಳು ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಶಾರುಖ್‌ ಖಾನ್‌ ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಅದನ್ನು ಸಾಬೀತು ಪಡಿಸುವಂತೆ ನಟ ಶಾರುಖ್‌ ಖಾನ್‌ ಒಂದು ಕೆಲಸ ಮಾಡಿದ್ದಾರೆ.  

ಶಾರುಖ್‌ ಖಾನ್‌ ತಮ್ಮ ಕಿರಿಯ ಮಗನಾದ ಅಬ್ರಮ್‌ಗೆ 3 ಶಾಲೆಗೆ ಹೋಗಲು 3 ಕೋಟಿ ರೂಪಾಯಿ ಬೆಲೆ ಬಾಲುವ ಕಾರೊಂದನ್ನು ಗಿಫ್ಟ್‌ ಆಗಿ ನೀಡಿದ್ದಾರೆ.   

ಎಲ್‌ ಪಿ ವಿ ಲೆಕ್ಸಸ್‌ ಎಲ್‌ ಎಮ್‌(MPV Lexus LM) ಕಂಪನಿಯ ಎಲೆಕ್ಟ್ರಿಕ್‌ ಕಾರು ಇದಾಗಿದ್ದು, ಈ ಕಾರು ಅನೇಕ ವಿಶೇಷ ಸೌಕರ್ಯಗಳನ್ನು ಒಳಗೊಂಡಿದೆ.   

ಈ ಕಾರಿನಲ್ಲಿ ಆಟೋಮೆಟಿಕ್‌ ಡೋರ್‌, 23 ಸ್ಪೀಕರ್‌ಗಳೊಂದಿಗೆ 3ಡಿ ಸೌಂಡ್‌ ಅನ್ನು ಒಳಗೊಂಡಿದ್ದು, 121.9 cm ಅಲ್ಟ್ರಾ ವೈಡ್ ಡಿಸ್ಪ್ಲೇ ಜೊತೆಗೆ ಪೂರ್ಣ HD 35.5 cm ಎಲೆಕ್ಟ್ರೋ ಮಲ್ಟಿ-ವಿಷನ್ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link