30 ವರ್ಷಗಳ ಬಳಿಕ ದೀಪಾವಳಿಯಲ್ಲಿ ಒಟ್ಟಿಗೆ `ಮೂರು` ರಾಜಯೋಗಗಳು: ಈ ರಾಶಿಯವರಿಗೆ ಲಕ್ಷ್ಮಿಯ ವಿಶೇಷ ಆಶೀರ್ವಾದ
ದೀಪಗಳ ಹಬ್ಬ ದೀಪಾವಳಿಯು ಈ ವರ್ಷ ಕೆಲವು ರಾಶಿಯವರ ಅದೃಷ್ಟವನ್ನೇ ಬೆಳಗಲಿದೆ. ತಾಯಿ ಮಹಾಲಕ್ಷ್ಮಿಯ ಆಶೀರ್ವಾದದಿಂದ ಅವರ ಜೀವನದಲ್ಲಿ ಭಾರೀ ಸಂಪತ್ತು ಒಲಿಯಲಿದೆ ಎನ್ನಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಗೂ ಮೊದಲು ಬುಧ-ಸೂರ್ಯರಿಂದ ಬುಧಾದಿತ್ಯ ರಾಜಯೋಗ, ತನ್ನ ಮೂಲ ತ್ರಿಕೋನ ರಾಶಿಯಲ್ಲಿರುವ ಶನಿಯಿಂದ ಶಶ ರಾಜಯೋಗ, ಇದಲ್ಲದೆ, ವಿಶೇಷವಾದ ಆಯುಷ್ಮಾನ್ ರಾಜಯೋಗಗಳಂತಹ ಮೂರು ಶುಭ ಯೋಗಗಳು ನಿರ್ಮಾಣವಾಗುತ್ತಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 30 ವರ್ಷಗಳ ಬಳಿಕ ದೀಪಾವಳಿಯ ಸಂದರ್ಭದಲ್ಲಿ ಈ ಮೂರು ( ಶಶ, ಬುಧಾದಿತ್ಯ, ಆಯುಷ್ಮಾನ್) ರಾಜಯೋಗಗಳು ನಿರ್ಮಾಣವಾಗುತ್ತಿವೆ.
ಶಶ, ಬುಧಾದಿತ್ಯ, ಆಯುಷ್ಮಾನ್ ರಾಜಯೋಗಗಳ ಶುಭ-ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಲಕ್ಷ್ಮಿಯ ವಿಶೇಷ ಆಶೀರ್ವಾದದಿಂದ ಇವರಿಗೆ ಕೋಟ್ಯಾಧಿಪತಿಯಾಗುವ ಯೋಗವಿದೆ ಎನ್ನಲಾಗುತ್ತಿದೆ.
ತಾಯಿ ಮಹಾಲಕ್ಷ್ಮಿಯ ಅನುಗ್ರಹದಿಂದ ಈ ವರ್ಷ ದೀಪಾವಳಿಯಲ್ಲಿ ನಿಮ್ಮ ಸಂಪತ್ತು ವೃದ್ಧಿಯಾಗಲಿದೆ. ನೀವು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಶನಿ, ಸೂರ್ಯ, ಬುಧರಿಂದ ಜೀವನದ ಸರ್ವ ಸುಖಗಳನ್ನೂ ನೀವು ಅನುಭವಿಸುವಿರಿ.
ಈ ದೀಪಾವಳಿ ವೃಷಭ ರಾಶಿಯವರಿಗೂ ಕೂಡ ವಿಶೇಷ ಪ್ರಯೋಜನವನ್ನು ನೀಡಲಿದೆ. ನಿಮ್ಮ ಬಹು ವರ್ಷಗಳ ಕಠಿಣ ಪರಿಶ್ರಮ ಫಲಪ್ರದವಾಗುವ ಸಕಾಲ ಇದು. ಉದ್ಯೋಗಸ್ಥರಿಗೆ ಬಡ್ತಿ, ವ್ಯಾಪಾರ-ವ್ಯವಹಾರದಲ್ಲಿ ಎಂದೂ ಕಂಡಿರದಷ್ಟು ಆದಾಯವನ್ನು ಕಾಣುವಿರಿ. ಹೊಸ ಆದಾಯದ ಮೂಲಗಳ ಜೊತೆಗೆ ಆರೋಗ್ಯವೂ ವೃದ್ದಿಯಾಗಲಿದೆ.
ತ್ರಿವಳಿ ರಾಜಯೋಗಗಳು ಮಿಥುನ ರಾಶಿಯವರ ಬದುಕಿನಲ್ಲೂ ಶುಭ ಫಲಗಳನ್ನು ಹೊತ್ತು ತರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಮಕ್ಕಳ ಕಡೆಯಿಂದ ಶುಭ ಸುದ್ದಿ ಸ್ವೀಕರಿಸುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತಲೂ ಸುಧಾರಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.