30ವರ್ಷಗಳ ಬಳಿಕ ಶಶ ಮಹಾಪುರುಷ ರಾಜಯೋಗ: ಈ ಜನ್ಮರಾಶಿಯವರಿಗೆ ಕಷ್ಟ ಕಳೆದು ಅಷ್ಟೈಶ್ವರ್ಯ ಕರುಣಿಸುವ ಶನಿ ಮಹಾತ್ಮ!

Mon, 02 Dec 2024-6:51 am,

ಪ್ರಸ್ತುತ, ಕುಂಭ ರಾಶಿಯಲ್ಲಿರುವ ಶನಿ 28 ಮಾರ್ಚ್ 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಸುಮಾರು 30 ವರ್ಷಗಳ ಬಳಿಕ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ 'ಶಶ ಮಹಾಪುರುಷ ರಾಜಯೋಗ'ವನ್ನು ಸೃಷ್ಟಿಸಿದ್ದಾನೆ. 

ಶಶ ಮಹಾಪುರುಷ ರಾಜಯೋಗದ ಪ್ರಭಾವು ಕೆಲವು ರಾಶಿಯವರಿಗೆ ಅವರ ಬದುಕಿನ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಕುಬೇರನ ಸಂಪತ್ತೇ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ. 

ಮಿಥುನ ರಾಶಿ: ಶಶ ರಾಜಯೋಗವು ಈ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ, ಗೌರವವನ್ನು ನೀಡಲಿದೆ. ಶನಿ ಮಹಾದಶ ಪ್ರಭಾವದಿಂದ ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಶನಿ ದಯೆಯು ಆದಾಯದ ಹೊಸ ಮೂಲಗಳನ್ನು ಹೆಚ್ಚಿಸಲಿದೆ. ಹೊಸ ವ್ಯವಹಾರವನ್ನು ಆರಂಭಿಸಲು ಇದು ಸಕಾಲ. 

ಮಕರ ರಾಶಿ: ಶನಿಯ ವಿಶೇಷ ಆಶೀರ್ವಾದ ಈ ರಾಶಿಯವರ ಮೇಲಿರಲಿದ್ದು 2025ರ ಮಾರ್ಚ್ ವರೆಗೂ ನಿಮ್ಮ ಯೋಜಿತ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ವೃದ್ಧಿಯಾಗಿ, ಹೊಸ ಆದಾಯದ ಮೂಲಗಳನ್ನು ಕಂಡು ಕೊಳ್ಳುವಿರಿ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗಬಹುದು. 

ಕುಂಭ ರಾಶಿ: ಶನಿ ದಯೆಯಿಂದ ನಿರ್ಮಾಣವಾಗಿರುವ ಶಶ ರಾಜಯೋಗವು ಈ ರಾಶಿಯವರಿಗೆ ಅದ್ಭುತ ಫಲಗಳನ್ನೇ ನೀಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಇದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಿದೆ. 2025ರ ವರ್ಷದಲ್ಲಿ ಸಾಕ್ಷಾತ್ ಕುಬೇರನ ಸಂಪತ್ತೇ ನಿಮ್ಮದಾಗುವ ನಿರೀಕ್ಷೆಯಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link