Shani Margi: ಶನಿಯ ನೇರ ಸಂಚಾರದಿಂದ ಶಶ ರಾಜಯೋಗ, ಮೂರು ರಾಶಿಯವರಿಗೆ ಗೋಲ್ಡನ್ ಟೈಮ್
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನು ಸದ್ಯ ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಇನ್ನೂ ಒಂದೂವರೆ ತಿಂಗಳಿನಲ್ಲಿ ಶನಿಯ ನೇರ ಸಂಚಾರ ಆರಂಭವಾಗಲಿದೆ.
ನವೆಂಬರ್ 04, 2023ರಿಂದ ಶನಿ ದೇವನ ನೇರ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಶುಭಕರ ಶಶ ರಾಜಯೋಗವೂ ನಿರ್ಮಾಣವಾಗಲಿದೆ.
ಮಾರ್ಗಿ ಶನಿಯಿಂದಾಗಿ ನಿರ್ಮಾಣವಾಗಲಿರುವ ಶಶ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೂ, ಮಾರ್ಗಿ ಶನಿಯಿಂದ ನಿರ್ಮಾಣವಾಗಲಿರುವ ಶಶ ರಾಜಯೋಗವು ಮೂರು ರಾಶಿಯವರ ಜೀವನದಲ್ಲಿ ಬಂಗಾರದ ಸಮಯವನ್ನು ತರಲಿದೆ ಎಂದು ಹೇಳಲಾಗಿದೆ.
ಶನಿ ನೇರ ಸಂಚಾರದಿಂದ ನಿರ್ಮಾಣವಾಗಲಿರುವ ಶಶ ರಾಜಯೋಗವು ವೃಷಭ ರಾಶಿಯವರ ಜೀವನದ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ ವೃತ್ತಿ ಬದುಕಿನಲ್ಲಿ ಸುವರ್ಣಾವಕಾಶಗಳು ಲಭ್ಯವಾಗಲಿವೆ. ಇದು ಆರ್ಥಿಕ ಪ್ರಯೋಜನಗಳನ್ನು ತರಲಿದೆ.
ಶನಿ ನೇರ ಸಂಚಾರದಿಂದ ಸೃಷ್ಟಿಯಾಗಲಿರುವ ಶಶ ರಾಜಯೋಗವು ಸಿಂಹ ರಾಶಿಯವರಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಕೌಟುಂಬಿಕ ಸುಖವೂ ವೃದ್ಧಿಯಾಗಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಕುಂಭ ರಾಶಿಯಲ್ಲಿಯೇ ಹಿಮ್ಮುಖವಾಗಿರುವ ಶನಿ ಇನ್ನೂ ಒಂದೂವರೆ ತಿಂಗಳಿನಲ್ಲಿ ಇದೇ ರಾಶಿಯಲ್ಲಿ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮವಾಗಿ ಕುಂಭ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಪ್ರಗತಿಯನ್ನು ಕಾಣುವಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.