ಶನಿದೇವರಿಂದ ರೂಪುಗೊಂಡ ಶಶರಾಜ ಯೋಗ: ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ..!

Sat, 14 Sep 2024-4:52 pm,

ವೃಷಭ ರಾಶಿಯವರ ೧೦ನೇ ಮನೆಯಲ್ಲಿ ಶನಿಯು ಸಂಚಾರ ಮಾಡಲಿದೆ. ಶನಿಯ ಉಪಸ್ಥಿತಿಯಿಂದ ವೃಷಭ ರಾಶಿಯವರಿಗೆ ಲಾಭದ ಸಾಧ್ಯತೆಗಳಿವೆ. ನೀವು ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಹೊಸ ವಾಹನ ಖರೀದಿಸಬಹುದು. ಇದಲ್ಲದೆ ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಲ್ಲಿ ಯಶಸ್ವಿಯಾಗುತ್ತೀರಿ. ದಿಟ್ಟ ನಿರ್ಧಾರ ತೆಗೆದುಕೊಳ್ಳುವುದರಿಂದ ಸಾಕಷ್ಟು ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆದಾಯವೂ ಈ ಸಮಯದಲ್ಲಿ ಹೆಚ್ಚಾಗಲಿದೆ. 

ಶನಿಯು ತುಲಾ ರಾಶಿಯವರ ೫ನೇ ಮನೆಯಲ್ಲಿರುತ್ತದೆ. ಇದರಿಂದ ತುಲಾ ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ನೀವು ಪ್ರಚಾರ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಇದಲ್ಲದೆ ಉದ್ಯೋಗದಲ್ಲಿ ಬದಲಾವಣೆ ಬಗ್ಗೆ ಯೋಚಿಸುತ್ತಿರುವ ಈ ರಾಶಿಯ ಜನರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತಾರೆ. ನಿಮ್ಮ ಕೆಲಸವು ಬದಲಾಗಲಿದ್ದು, ಈ ಸಮಯದಲ್ಲಿ ನಿಮ್ಮ ಸಂಬಳ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಅದ್ಭುತ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ನೀವು ದೊಡ್ಡ ಯಶಸ್ಸು ಸಾಧಿಸಬಹುದು. 

ಶನಿಯು ಧನು ರಾಶಿಯ ೩ನೇ ಮನೆಯಲ್ಲಿರುತ್ತಾನೆ. ಇದರಿಂದ ಶನಿದೇವರ ಆಶೀರ್ವಾದ ನಿಮ್ಮೊಂದಿಗೆ ಇರುತ್ತದೆ. ಶೀಘ್ರವೇ ನಿಮಗೆ ಶುಭ ಸುದ್ದಿ ಸಿಗಲಿದೆ. ಇದರಿಂದ ಶನಿದೇವರು ನಿಮ್ಮ ಕಾರ್ಯಗಳನ್ನು ಮೆಚ್ಚಿ ನಿಮ್ಮ ಶ್ರಮಕ್ಕೆ ತಕ್ಕ ಫಲ ನೀಡುತ್ತಾನೆ. ಇದರಿಂದ ಯಶಸ್ಸು ಮತ್ತು ಪ್ರಗತಿ ಸಾಧಿಸುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಈಗ ಕೊನೆಗೊಳ್ಳುತ್ತವೆ. ಅಪಾರ ಸುಖ-ಸಂಪತ್ತು ನಿಮಗೆ ದೊರೆಯಲಿವೆ.  

ಶನಿಯು ಮಕರ ರಾಶಿಯ ೨ನೇ ಮನೆಯಲ್ಲಿರುತ್ತದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ನಿಮ್ಮ ಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯಲಿದ್ದೀರಿ. ಶ್ರಮದ ನಂತರ ನೀವು ಪಡೆಯುವ ಯಶಸ್ಸಿನಿಂದ ನಿಮ್ಮ ಮನಸ್ಸು ತುಂಬಾ ಸಂತೋಷವಾಗುತ್ತದೆ. ನೀವು ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದರೆ ವಿದೇಶ ಪ್ರವಾಸದ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಶುಭ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಬಹಳ ದಿನಗಳಿಂದ ಬಾಕಿಯಿದ್ದ ಯಾವುದೇ ಶುಭ ಕಾರ್ಯಗಳು ಪೂರ್ಣಗೊಳ್ಳಲಿವೆ. ದಾಂಪತ್ಯ ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಅವಿವಾಹಿತರಿಗೆ ವಿವಾಹದ ಅವಕಾಶಗಳು ಸಿಗಲಿವೆ.

ಈ ಅವಧಿಯಲ್ಲಿ ಶನಿಯು ಕುಂಭ ರಾಶಿಯ ಲಗ್ನ ಮನೆಯಲ್ಲಿರುತ್ತಾನೆ. ಶನಿಯು ಕುಂಭ ರಾಶಿಗೆ ಮಂಗಳಕರವಾಗಿರುತ್ತದೆ. ಜ್ಯೋತಿಷ್ಯದಲ್ಲಿ ಶನಿಯ ಪಾದವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿಯು ಕುಂಭ ರಾಶಿಯವರನ್ನು ಮೀನರಾಶಿಗೆ ತೆರಳುವ ಮೂಲಕ ಶ್ರೀಮಂತರನ್ನಾಗಿಸಲಿದ್ದಾನೆ. ಈ ಅವಧಿಯಲ್ಲಿ ನೀವು ಅನಿರೀಕ್ಷಿತ ಲಾಭ ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಯೂ ಇರುತ್ತದೆ. ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ದೊರೆಯಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link