Cricketers Love Story: ಇಬ್ಬರು ಮಕ್ಕಳ ತಾಯಿ.. ತನಗಿಂತ 10 ವರ್ಷ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿದ್ದ ಖ್ಯಾತ ಕ್ರಿಕೆಟರ್.. ಆದರೆ ಕೊನೆಗೆ ಸಿಕ್ಕಿದ್ದು ವಿಚ್ಛೇದನ !

Tue, 16 Apr 2024-7:50 am,

ಫೇಸ್ ಬುಕ್ ಮೂಲಕ ಧವನ್ ಮತ್ತು ಆಯೇಷಾ ನಡುವೆ ಸ್ನೇಹ ಬೆಳೆಯಿತು. ನಂತರ ಈ ಸ್ನೇಹವೇ ಪ್ರೇಮವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದರು.

ತನಗೆ ಈಗಾಗಲೇ ಒಂದು ಬಾರಿ ಮದುವೆಯಾಗಿದೆ ಮತ್ತು ವಿಚ್ಛೇದನ ಪಡೆದಿದ್ದೇನೆ ಎಂದು ಆಯೇಷಾ ಧವನ್‌ ಬಳಿ ಹೇಳಿಕೊಂಡರು. ಅವರಿಗೆ ಇಬ್ಬರು ಮಕ್ಕಳೂ ಇರುವ ವಿಚಾರ ತಿಳಿಸಿದರು. 

ಇದರಿಂದ ಶಿಖರ್ ಧವನ್‌ ಭಾವನೆಗಳಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಆಯೇಷಾ 10 ವರ್ಷ ದೊಡ್ಡವಳಾಗಿದ್ದರೂ ಶಿಖರ್ ಧವನ್‌ ಆಕೆಗೆ ಮದುವೆ ಆಗ್ತೀರಾ ಎಂದು ಕೇಳಿದ್ದರು.

2009ರಲ್ಲಿ ಶಿಖರ್ ಧವನ್‌ ಮತ್ತು ಆಯೇಷಾ ಮುಖರ್ಜಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಕ್ಟೋಬರ್ 30, 2012 ರಂದು ವಿವಾಹವಾದರು.

ಆಯೇಷಾ ಅವರ ಮೊದಲ ಮದುವೆ ಉದ್ಯಮಿಯೊಂದಿಗೆ ನಡೆದಿತ್ತು. ಅವರಿಗೆ ರಿಯಾ ಮತ್ತು ಅಲಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಹುಡುಗಿಯರು ಶಿಖರ್ ಧವನ್ ಜೊತೆ ವಾಸಿಸುತ್ತಿದ್ದರು.

ಆಯೇಷಾ ಮುಖರ್ಜಿ ಮತ್ತು ಶಿಖರ್‌ ಧವನ್ ಅವರು 2014 ರಲ್ಲಿ‌ ಗಂಡು ಮಗುವನ್ನು ಸ್ವಾಗತಿಸಿದರು. ಮಗನ ಹೆಸರು ಹೆಸರು ಜೋರಾವರ್. 

ಶಿಖರ್‌ ಧವನ್ ಪತ್ನಿ ಆಯೇಷಾ ಮುಖರ್ಜಿ ಭಾರತದಲ್ಲಿ ಜನಿಸಿದರೂ, ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. ವೃತ್ತಿಯಲ್ಲಿ ಆಯೇಷಾ ಮುಖರ್ಜಿ ಬಾಕ್ಸರ್ ಆಗಿದ್ದರು. 

2023 ರಲ್ಲಿ ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link