ಇದೇ ನನ್ನ ಸೌಂದರ್ಯ ಮತ್ತು ಫಿಟ್ನೆಸ್‌ಗೆ ಕಾರಣ..! ಡಯಟ್ ಸೀಕ್ರೆಟ್ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ

Tue, 06 Aug 2024-2:55 pm,

1998 ರಲ್ಲಿ  ʼಪ್ರೀತ್ಸೋದ್ ತಪ್ಪಾʼ ಎಂಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಕನ್ನಡ ಸಿನಿರಸಿಕರ ಮನ ಗೆದ್ದರು..  

ಕರಾವಳಿ ಸುಂದರಿ ಶಿಲ್ಪಾಗೆ ಕರ್ನಾಟಕದಲ್ಲಿಯೂ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ... ಇಂದಿಗೂ ನಟಿಯ ಕುಟುಂಬ ಮಂಗಳೂರಿನಲ್ಲಿದೆ..  

ಭಾರತೀಯ ಸಿನಿರಂಗದಲ್ಲಿ ಶಿಲ್ಪಾಗೆ ಸಾಕಷ್ಟು ಸಾಕಷ್ಟು ಕ್ರೇಜ್‌ ಇದೆ.. ಬಿಟೌನ್‌ ಬಹುಬೇಡಿಕೆಯ ನಟಿಯರಲ್ಲಿ ಈ ಸುಂದರಿಯೂ ಒಬ್ಬಳು..   

90ರ ದಶಕದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಶೆಟ್ಟಿ ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ. ಅದೇ ಮೈಕಟ್ಟನ್ನ ಕಾಪಾಡಿಕೊಂಡು ಬಂದಿದ್ದಾರೆ..   

ಅನೇಕರು ಶಿಲ್ಪಾ ಶೆಟ್ಟಿ ಆರೋಗ್ಯ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚು ತಿಳಿಯಲು ಬಯಸುತ್ತಾರೆ.. ಅಲ್ಲದೆ, ಅವರ ಡಯಟ್‌ ಸಿಕ್ರೇಟ್‌ ಅರಿಯಲು ಕುತೂಹಲರಾಗಿದ್ದಾರೆ..  

ಆಕೆ ತನ್ನ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಯೌವನದ ನೋಟವನ್ನು ಉಳಿಸಿಕೊಳ್ಳಲು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾಳೆ ಎಂದು ತಿಳಿಯಲು ಬಯಸುತ್ತಾರೆ..  

ಹೀಗಿರುವಾಗ ಸ್ವತಃ ಶಿಲ್ಪಾ ಶೆಟ್ಟಿ ತಮ್ಮ ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬೆಳಿಗ್ಗೆ ಎದ್ದ ನಂತರ, ನಾನು ಬೆಚ್ಚಗಿನ ನೀರನ್ನು ಕುಡಿಯುತ್ತೇನೆ, ಅದು ದೇಹದಿಂದ ವಿಷಕಾರಿ ಅನಿಲಗಳನ್ನು ಹೊರಹಾಕುತ್ತದೆ ಅಲ್ಲದೆ, ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಎಂದು ಹೇಳಿದ್ದಾರೆ...  

ಅಲ್ಲದೆ, ವಿಟಮಿನ್ ಸಿ ಹೇರಳವಾಗಿರುವ ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರತಿನಿತ್ಯ ಸೇವಿಸುತ್ತೇನೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರ ಹೊರತಾಗಿ ಯೋಗ ನನ್ನ ಜೀವನದ ಒಂದು ಭಾಗವಾಗಿದೆ.  

ನಾನು ಯಾವುದೇ ಕಾರಣಕ್ಕೂ ಯೋಗ ಮಾಡುವುದನ್ನು ಮಿಸ್ ಮಾಡಿಕೊಳ್ಳಲ್ಲ. ಇದೇ ನನ್ನ ಸೌಂದರ್ಯ ಮತ್ತು ಫಿಟ್ನೆಸ್ ಸೀಕ್ರೆಟ್ ಎಂದು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link