ಶೋಭಾ ಶೆಟ್ಟಿ ಬಳಿಕ ಬಿಗ್ ಬಾಸ್ ನಿಂದ ಹೊರ ಬರಲು ನಿರ್ಧರಿಸಿದ ಮತ್ತೊಬ್ಬ ಸ್ಪರ್ಧಿ!
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಶಿಶಿರ್ ಶಾಸ್ತ್ರಿ ಮತ್ತು ಚೈತ್ರಾ ಕುಂದಾಪುರ ನಡುವೆ ಬಿಗ್ ಫೈಟ್ ನಡೆದಿದೆ.
ಇದಕ್ಕೂ ಮುನ್ನ ಚೈತ್ರಾ ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡುವಾಗ ಮೋಕ್ಷಿತಾ ಅವರನ್ನು ಸೈಕೋ ಅಂತೀರಾ ಎಂದಿದ್ದಾರೆ.
ಆಗ ತ್ರಿವಿಕ್ರಮ್ ನೀವೂ ಸಹ ನನ್ನ ಶಿಶಿರ್ ಅವರನ್ನು ಹೆಣ್ಣು ಮಕ್ಕಳ ಹಿಂದೆ ತಿರುಗುತ್ತಿರುವ ಜೊಲ್ಲ ಎಂದು ಹೇಳಿದ್ದಾರೆ ಎನ್ನುತ್ತಾರೆ.
ಇದರಿಂದ ಕೋಪಗೊಂಡ ಶಿಶಿರ್, ನನಗೆ ಈ ಬಗ್ಗೆ ಕ್ಲಾರಿಟಿ ಸಿಗಬೇಕು. ಅಲ್ಲಿಯವರೆಗೂ ಇಲ್ಲಿಂದ ಕದಲುವುದಿಲ್ಲ. ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ.
ನಾನು ಇನ್ನೂ ಈ ಮನೆಯಲ್ಲಿ ಇರುವುದಿಲ್ಲ. ನನಗೆ ಹೊರಗೆ ಕಳಿಸಿ ಎಂದಿದ್ದಾರೆ.