ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಮದುವೆ ಬಗ್ಗೆ ಮಾತನಾಡಿದ ಶಿಶಿರ್ ಶಾಸ್ತ್ರಿ ! ಯಾವಾಗ ವಿವಾಹ? ಯಾರದು ಹುಡುಗಿ ?
ಶಿಶಿರ್ ಶಾಸ್ತ್ರೀ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾಗಿದೆ. ಶಿಶಿರ್ ಬಿಗ್ ಬಾಸ್ ನಿಂದ ಎಲಿಮಿನೆಟ್ ಆಗಿರುವುದು ಬಹುತೇಕ ಮಂದಿಗೆ ದೊಡ್ಡ ಶಾಕ್ ಆಗಿತ್ತು.
ತಾನು ಹೊರ ಜಗತ್ತಿನಲ್ಲಿ ಯಾವ ರೀತಿ ಇದ್ದರೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿಯೂ ಆಟ ಆಡಿ, ತನ್ನತನವನ್ನು ಎಲ್ಲೂ ಬಿಟ್ಟುಕೊಡದೇ ವೀಕ್ಷಕರ ಮನ ಗೆದ್ದ ಸ್ಪರ್ಧಿ.
ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಮತ್ತು ಐಶ್ವರ್ಯ ಮಧ್ಯೆ ಒಂದೊಳ್ಳೆ ಸ್ನೇಹ ಬೆಸೆದುಕೊಂಡಿತ್ತು. ವೀಕ್ಷಕರಿಗೂ ಇವರಿಬ್ಬರ ಕೆಮೆಸ್ಟ್ರಿ ಇಷ್ಟವಾಗುತ್ತಿತ್ತು.
ಆದರೆ ನಮ್ಮಿಬ್ಬರದ್ದು ಪವಿತ್ರ ಸ್ನೇಹ ಅಷ್ಟೇ. ಅದಕ್ಕೆ ಮೀರಿದ ಸಂಬಂಧ ಅಲ್ಲ ಎನ್ನುವುದನ್ನು ಶಿಶಿರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇನ್ನು ಮದುವೆ ಬಗ್ಗೆಯೂ ಮಾತನಾಡಿದ ಶಿಶಿರ್ ಅದಕ್ಕೆ ಇನ್ನೂ ಟೈಮ್ ಬಂದಿಲ್ಲ. ಆದ್ರೆ ಈಗ ನನ್ನ ವೈಯಕ್ತಿಕ ಜೀವನವನ್ನು ನೋಡಿಕೊಳ್ಳುವ ಸಮಯ ಬಂದಿದೆ ಎಂದು ಉತ್ತರಿಸಿದ್ದಾರೆ.
ಮದುವೆ ಯಾವಾಗ ಎನ್ನುವ ಸ್ಪಷ್ಟ ಪ್ರಶ್ನೆಗೆ ಸ್ಪಷ್ಟವಾಗಿ ಶಿಶಿರ್ ನೀಡಿದ ಉತ್ತರ ಅಮ್ಮನನ್ನು ಕೇಳಬೇಕು ಎನ್ನುವುದು. ಅಂದರೆ ಅಮ್ಮ ಒಪ್ಪಿದ ತಕ್ಷಣ ಶಿಶಿರ್ ಮದುವೆಯಾಗುವುದಕ್ಕೆ ರೆಡಿ ಎಂದಾಯಿತು.
ಒಟ್ಟಿನಲ್ಲಿ ಶಿಶಿರ್ ಬಾಳಲ್ಲಿ ಒಂದೊಳ್ಳೆ ಹುಡುಗಿ ಪ್ರವೇಶ ಆಗಲಿ, ಅವರ ಬದುಕು ಬಂಗಾರವಾಗಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ.