ಶ್ರಾವಣದಲ್ಲಿ 90 ವರ್ಷಗಳ ಬಳಿಕ ಶಿವಚಂದ್ರ ಯೋಗ: ಈ 3 ರಾಶಿಗಳ ಮೇಲೆ ಮಹಾಶಿವನ ಕೃಪಾದೃಷ್ಟಿ! ಸಿರಿಸಂಪತ್ತಿನ ಮಳೆ, ಇವರಷ್ಟು ಲಕ್ಕಿ ಮತ್ಯಾರು ಇರಲ್ಲ

Mon, 05 Aug 2024-8:54 pm,

ಈ ವರ್ಷದ ಶ್ರಾವಣವು ಮಂಗಳಕರ ಯೋಗಗಳನ್ನು ಸೃಷ್ಟಿಸುತ್ತಿದೆ. ಅದರಲ್ಲಿ ಆಗಸ್ಟ್ 19 ರಂದು, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ಸೌಭಾಗ್ಯ ಯೋಗ, ಶೋಭನ ಯೋಗ ಸೇರಿವೆ.

 

ಹಿಂದೂ ಕ್ಯಾಲೆಂಡರ್ ಪ್ರಕಾರ, ಇಷ್ಟು ಯೋಗಗಳು ಒಟ್ಟಾಗಿ ರೂಪುಗೊಳ್ಳುತ್ತಿರುವ ಸುಮಾರು 90 ವರ್ಷಗಳ ಬಳಿಕ ಇದೇ ಮೊದಲು. ಇನ್ನು ಶ್ರಾವಣ ನಕ್ಷತ್ರದ ಅಧಿಪತಿ ಚಂದ್ರನಾಗಿದ್ದರೆ, ಮಾಸ ಮತ್ತು ದಿನದ ಅಧಿಪತಿ ಮಹಾದೇವ ಶಿವ. ಹೀಗಿರುವಾಗ ಈ ಸಂದರ್ಭದಲ್ಲಿ ಶಿವ ಚಂದ್ರ ಯೋಗ ರೂಪುಗೊಂಡು ಎಲ್ಲಾ ರಾಶಿಗಳಿಗೆ ಪ್ರಯೋಜನ ನೀಡಲಿದೆ. ಅದರಲ್ಲೂ ಮೂರು ರಾಶಿಗಳಿಗೆ ವಿಶೇಷ ಫಲ ಲಭಿಸಲಿದೆ.

 

ವೃಷಭ ರಾಶಿ: ಈ ರಾಶಿಯ ಜನರು, ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಶಿವನ ಕೃಪೆಯಿಂದ ಅಪಾರ ಆರ್ಥಿಕ ಲಾಭಗಳಾಗಲಿವೆ. ವೈವಾಹಿಕ ಜೀವನದಲ್ಲಿನ ಕಷ್ಟಗಳು ಕೊನೆಗೊಳ್ಳುತ್ತವೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

 

ಕಟಕ ರಾಶಿ: ಮನಸ್ಸು ಶಾಂತ ಮತ್ತು ಧನಾತ್ಮಕವಾಗಿರುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳನ್ನು ಮಾಡಲು ಇದು ಸರಿಯಾದ ಸಮಯ. ಲಾಭದ ಪ್ರಮಾಣ ಹೆಚ್ಚಾಗುತ್ತದೆ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಾಧ್ಯತೆಗಳಿವೆ. ಕೌಟುಂಬಿಕ ವಿಚಾರಗಳಲ್ಲಿ ಪತಿ ಪತ್ನಿಯರ ನಡುವೆ ಪರಸ್ಪರ ತಿಳುವಳಿಕೆ ಹೆಚ್ಚಲಿದೆ. ಸಂಬಂಧಗಳು ಮಧುರವಾಗಿರುತ್ತವೆ.

 

ಸಿಂಹ ರಾಶಿ: ಈ ಸಮಯವು ಆರ್ಥಿಕ ದೃಷ್ಟಿಕೋನದಿಂದ ಉದ್ಯಮಿಗಳಿಗೆ ತುಂಬಾ ಅನುಕೂಲಕರವಾಗಿದೆ. ಅನೇಕ ರೀತಿಯಲ್ಲಿ ಸಂಪತ್ತು ಗಳಿಸುವ ಸಾಧ್ಯತೆಗಳಿವೆ. ವ್ಯಾಪಾರ ವಹಿವಾಟುಗಳು ಮತ್ತು ಲಾಭಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಬೋನಸ್ ಸಿಗುವ ಸಾಧ್ಯತೆ ಇದೆ. ಪ್ರೇಮ ಪಕ್ಷಿಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತವೆ.

 

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA ಅದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link