ಮುಸ್ಲಿಂ ಯುವತಿ ಮೇಲೆ ಲವ್..‌ ಧರ್ಮ ಅಡ್ಡಿಯಾದ್ರೂ ಪ್ರೀತಿಗಾಗಿ ಎರಡು ಬಾರಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗನೀತ!

Fri, 19 Jul 2024-4:07 pm,

ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಶಿವಂ ದುಬೆ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ವಿಶ್ವಕಪ್‌ 2024ರ ಕೊನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದುಬೆ, ಭಾರತ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು.  

ನಾವಿಂದು ಈ ವರದಿಯಲ್ಲಿ ಕ್ರಿಕೆಟಿಗ ಶಿವಂ ದುಬೆ ಲವ್‌ ಸ್ಟೋರಿ ಬಗ್ಗೆ ಮಾಹಿತಿ ನೀಡಲಿದ್ದೇವೆ.  

ಶಿವಂ ದುಬೆ  ಅಂಜುಮ್ ಖಾನ್ ಎಂಬಾಕೆಯನ್ನು ಪ್ರೀತಿಸಿ ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿರು. ಇವರಿಬ್ಬರದ್ದು ಬೇರೆ ಬೇರೆ ಧರ್ಮ. ಆದರೂ ಪ್ರೀತಿಗಾಗಿ ಎರಡೂ ಧರ್ಮದ ಸಂಪ್ರದಾಯಗಳಿಗೆ ಅನುಸಾರವಾಗಿ ದುಬೆ ವಿವಾಹವಾಗಿದ್ದರು.   

ಶಿವಂ ದುಬೆ 2021 ರಲ್ಲಿ ಅಂಜುಮ್ ಖಾನ್ ರನ್ನು ವಿವಾಹವಾದರು. ಶಿವಂ ದುಬೆ ಹಿಂದೂ ಧರ್ಮದವರು, ಅಂಜುಮ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿ, ಶಿವಂ ಮತ್ತು ಅಂಜುಮ್ ಎರಡೂ ಧರ್ಮಗಳ ಸಂಪ್ರದಾಯಗಳ ಪ್ರಕಾರ ವಿವಾಹವಾದರು.  

ಮದುವೆಗೆ ಮೊದಲು, ಶಿವಂ ಮತ್ತು ಅಂಜುಮ್ ಖಾನ್ ಒಂದು ವರ್ಷ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ಸುದ್ದಿ ಯಾರ ಕಿವಿಗೂ ಬಿದ್ದಿರಲಿಲ್ಲ. ಇಷ್ಟೇ ಅಲ್ಲ, ಶಿವಂ ಮತ್ತು ಅಂಜುಮ್ ಅವರ ಮನೆಯವರು ಮೊದಲು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲವಂತೆ.  

ಅಂಜುಮ್ ಖಾನ್ ಮೂಲತಃ ಉತ್ತರ ಪ್ರದೇಶದವರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಅಂಜುಮ್ ಕೂಡ ಮಾಡೆಲ್ ಆಗಿದ್ದು, ಹಿಂದಿ ಧಾರಾವಾಹಿಗಳು ಮತ್ತು ಸಂಗೀತ ಆಲ್ಬಮ್‌ಗಳಲ್ಲಿಯೂ ಕೆಲಸ ಮಾಡಿದ್ದಾರೆ.  

ಅಂಜುಮ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ಶಿವಂ ಮತ್ತು ಕುಟುಂಬದೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link