ಮುಸ್ಲಿಂ ಯುವತಿಯನ್ನು ವರಿಸಿದ ಟೀಂ ಇಂಡಿಯಾ ಕ್ರಿಕೆಟಿಗ, ಅದ್ಬುತವಾಗಿದೆ ಇವರ ಪ್ರೇಮ ಕತೆ
ಶಿವಂ ದುಬೆ ಕಳೆದ ವರ್ಷ ಜುಲೈ 16 ರಂದು ತಮ್ಮ ಬಹುಕಾಲದ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು. ಇಬ್ಬರ ಪ್ರೇಮಕಥೆ ಯಾವ್ ಸಿನಿಮಾಗೂ ಕಡಿಮೆಯಿಲ್ಲ. ಶಿವಂ ತಮ್ಮ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದರು.
ಈ ಜೋಡಿ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದೆ. ಶಿವಂ ತಮ್ಮ ಮದುವೆಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಉತ್ತರ ಪ್ರದೇಶದವರು. ಅಂಜುಮ್ ಖಾನ್ ಮಾಡೆಲಿಂಗ್‌ನಲ್ಲಿ ಒಲವು ಹೊಂದಿದ್ದಾರೆ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಆಲ್ ರೌಂಡರ್ ಶಿವಂ ದುಬೆ ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು. ಶಿವಂ ದುಬೆ ಅವರು ಈ ಐಪಿಎಲ್ ಋತು ಆರಂಭಕ್ಕೂ ಮುಂಚೆಯೇ ಫೆಬ್ರವರಿಯಲ್ಲಿ ತಂದೆಯಾದರು.
28 ವರ್ಷದ ಶಿವಂ ದುಬೆ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಶಿವಂ ಭಾರತ ಪರ ಒಂದು ODI ಮತ್ತು 13 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 35 ಐಪಿಎಲ್ ಪಂದ್ಯಗಳನ್ನೂ ಆಡಿದ್ದಾರೆ