ಶಿವರಾಜ್‌ಕುಮಾರ್ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !
ನಟ ಶಿವರಾಜ್‌ಕುಮಾರ್ ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಶಿವಣ್ಣ ತಿಳಿಸಿದ್ದಾರೆ.
ಅನಾರೋಗ್ಯದ ನಡುವೆಯೂ ಶಿವರಾಜ್‌ಕುಮಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನವೆಂಬರ್ 15ರಂದು ರಿಲೀಸ್ ಆಗಲಿರುವ ಭೈರತಿ ರಣಗಲ್ ಸಿನಿಮಾದ ಪ್ರಚಾರದಲ್ಲಿದ್ದಾರೆ.
ʻʻನನಗೆ ಅನಾರೋಗ್ಯ ಇರುವುದು ನಿಜ ಮುಚ್ಚಿಡುವಂಥದ್ದೂ ಏನಿಲ್ಲ. ಟ್ರೀಟ್‌ಮೆಂಟ್ ನಡಿತಿದೆ. ಯಾರೂ ಆತಂಕ ಪಡಬೇಕಿಲ್ಲ. ಆರಂಭದಲ್ಲಿ ನನಗೂ ಭಯವಾಗಿತ್ತು. ಬಳಿಕ ಎಲ್ಲರೂ ಧೈರ್ಯ ತುಂಬಿದರುʼʼ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ʻʻಕೆಲವು ತಿಂಗಳುಗಳಿಂದ ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಆ ಸಮಯದಲ್ಲೇ ಸಿನಿಮಾ ಶೂಟಿಂಗ್ ಮಾಡಿದ್ದೇನೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದೆ. ನನ್ನ ಎಲ್ಲಾ ನಿರ್ಮಾಪಕರಿಗೂ ಅನಾರೋಗ್ಯದ ವಿಚಾರ ತಿಳಿದಿದೆʼʼ ಎಂದು ಶಿವಣ್ಣ ಹೇಳಿದ್ದಾರೆ.
ʻʻಟ್ರೀಟ್‌ಮೆಂಟ್ ನಡೆಯುತ್ತಿದೆ. ಇದಕ್ಕೆ 4 ಹಂತದಲ್ಲಿ ಚಿಕಿತ್ಸೆ ನಡೆಯಲಿದೆ. ಇನ್ನೂ ಎರಡು ಸೆಷನ್ ಬಾಕಿ ಇದೆ. ಒಂದು ಸರ್ಜರಿ ಕೂಡ ನಡೆಯಬೇಕು. ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ಹೋಗಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆʼʼ ಎಂದಿದ್ದಾರೆ.
ʻʻಜನವರಿಯಲ್ಲಿ ಸಂಕ್ರಾಂತಿಗೂ ಮೊದಲೇ ಭಾರತಕ್ಕೆ ಬರಬೇಕು ಎಂದುಕೊಂಡಿದ್ದೇನೆ. ಫೆಬ್ರವರಿಯಿಂದ ಫುಲ್ ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುತ್ತೇನೆʼʼ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಹೇಳಿದ್ದಾರೆ.