ಆಸ್ಪತ್ರೆಯ ಬೆಡ್ ಮೇಲೆ ಶೋಭಾ ಶೆಟ್ಟಿ... ಬಿಗ್ ಬಾಸ್‌ನಿಂದ ಹೊರ ಬರ್ತಿದ್ದಂತೆಯೇ ಅಡ್ಮಿಟ್ ಆಗಿದ್ದೇಕೆ?
Shobha Shetty Post About Health Issue : ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಶೋಭಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಅನಾರೋಗ್ಯದ ಕಾರಣ ಮನೆಯಿಂದ ಆಚೆ ಬಂದರು.
ಶೋ ಕ್ವಿಟ್ ಮಾಡಿ ಬಂದ ನಟಿ ಶೋಭಾ ಶೆಟ್ಟಿ ಸೀದಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಮನೆಯಿಂದ ಹೊರ ಬಂದ ನಂತರ ಶೋಭಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿದ್ದರು. ಇದಕ್ಕೆ ಸುದೀಪ್ ಮತ್ತು ವಾಹಿನಿಯನ್ನು ಟ್ಯಾಗ್ ಮಾಡಿದ್ದರು.
ಇದೀಗ ಶೋಭಾ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಇರುವ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಆತಂಕ್ಕೆ ಕಾರಣವಾಗಿದೆ.
ಕೈಗೆ ಗ್ಲುಕೋಸ್ ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಮೇಲೆ ಶೋಭಾ ಶೆಟ್ಟಿ ಮಲಗಿದ್ದನ್ನು ಈ ಫೋಟೋ ದಲ್ಲ ನೋಡಬಹುದು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಬರೆದಿದ್ದಾರೆ.
ಮತ್ತೊಂದು ಪೋಸ್ಟ್ ನ್ನು ಹಾಕಿದ್ದು, ಅದರಲ್ಲಿ ಶೋಭಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ ಎನ್ನಬಹುದು. ರಾಘವೇಂದ್ರ ಸ್ವಾಮಿಗಳ ಫೋಟೊಗೆ ಪೂಜೆ ಮಾಡುತ್ತಿರುವ ಶೇರ್ ಮಾಡಿದ್ದಾರೆ.