ಶೋಭಾ ಶೆಟ್ಟಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು... ಬಿಗ್ ಬಾಸ್ ಕ್ವಿಟ್ ಮಾಡಲು ನಿರ್ಧರಿಸಿದ್ದೇಕೆ?
ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಎನಿಸಿಕೊಂಡವರು. 14 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಫೈನಲ್ ಸನಿಹಕ್ಕೆ ಹೋಗಿ ಆಚೆ ಬಂದವರು.
ಹೀಗಿರುವಾಗ ಶೋಭಾ ಶೆಟ್ಟಿ ಕೇವಲ ಎರಡೇ ವಾರಕ್ಕೆ ಕನ್ನಡ ಬಿಗ್ ಬಾಸ್ ಬಿಟ್ಟು ಹೊರ ಬರಲು ನಿರ್ಧರಿಸಿದ್ದಾರೂ ಏಕೆ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ಶೋಭಾ ಶೆಟ್ಟಿ ಅವರನ್ನು ನಿನ್ನೆ ಸುದೀಪ್ ಸೇಫ್ ಎಂದು ಹೇಳಿದ ಬಳಿಕ ಮೊದಲಿಗೆ ಹೊರ ಹೋಗುತ್ತೇನೆ ಎಂದರು. ಬಳಿಕ ಸುದೀಪ್ ತಿಳಿ ಹೇಳಿದರು. ಆಗ ಶೋಭಾ ಶೆಟ್ಟಿ ಮನೆಯಲ್ಲಿರಲು ಒಪ್ಪಿಕೊಂಡು ಕುಳಿತರು.
ಬಳಿಕ ಶೋ ಮುಂದುವರೆಯಿತು. ನಂತರ ಸುದೀಪ್ ವರು ಚೈತ್ರಾ ಅವರನ್ನು ಸೇಫ್ ಮಾಡಿದರು. ಕೊನೆಯಲ್ಲಿ ಐಶ್ವರ್ಯಾ ಮತ್ತು ಶಿಶಿರ್ ಉಳಿದುಕೊಂಡರು. ಇವರಲ್ಲಿ ಒಬ್ಬರ ಹೆಸರನ್ನು ಕಿಚ್ಚ ಸುದೀಪ್ ಹೇಳುವಷ್ಟರಲ್ಲಿ ಶೋಭಾ ಅಡ್ಡಿ ಬಂದರು.
ಸುದೀಪ್ ಅವರಿಗೆ ಮಾತನಾಡಲು ನನಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು. ಆದರೆ ಸುದೀಪ್ ಮೊದಲಿಗೆ ಇಲ್ಲ ಎಂದರು. ಆ ಬಳಿಕ ಅವಕಾಶ ಕೊಟ್ಟರು.
ಆಗ ಶೋಭಾ ಶೆಟ್ಟಿ ಅಳುತ್ತ ಮಾತು ಶುರು ಮಾಡಿದರು. ನನಗೆ ಇರೋಕೆ ಆಗಲ್ಲ ಅಂತ ಅನಿಸ್ತಾ ಇದೆ ಎಂದರು. ಫಿಸಿಕಲಿ ಮೆಂಟಲಿ ಲೋ ಫೀಲ್ ಆಗ್ತಿದೆ. ನನಗೆ ನಾನು ಪ್ರೂವ್ ಮಾಡಿಕೊಳ್ಳಲು ಆಗ್ತಿಲ್ಲ ಎಂದು ಕಣ್ಣೀರಿಟ್ಟರು.
ನನ್ನ ಅನಾರೋಗ್ಯದಿಂದ ನನಗೆ ಇಲ್ಲಿರಲು ಆಗುತ್ತಿಲ್ಲ. ವೀಕ್ಷಕರ ಎಕ್ಪೆಕ್ಟೇಷನ್ ರೀಚ್ ಮಾಡಲು ಆಗುತ್ತಿಲ್ಲ ಎಂದು ಶೋಭಾ ಶಟ್ಟಿ ಅಳಲು ಆರಂಭಿಸಿದರು. ಆಗ ಸುದೀಪ್ ಬಿಗ್ ಬಾಸ್ ಮನೆಯ ಮೇನ್ ಡೋರ್ ಓಪನ್ ಮಾಡಿಸಿದರು.
ಈ ವೇಳೆ ಹೈಡ್ರಾಮಾ ಬಿಗ್ ಬಾಸ್ ನಲ್ಲಿ ನಡೆಯಿತು. ಇದರಿಂದ ಸುದೀಪ್ ಕೋಪಗೊಂಡರು. ಆಗ ಶೋಭಾ, ನನಗೆ ಇರೋಕೆ ಆಗ್ತಿಲ್ಲ ಎಂದರು. ಸರಿ ಹಾಗಿದ್ರೆ ಹೊರಡಿ ಎಂದು ಸುದೀಪ್ ಹೇಳಿದರು.
ಶೋಭಾ ಕಳೆದ ವಾರ ಪೂರ್ತಿ ಡಲ್ ಆಗೇ ಇದ್ದರು. ಅವರನ್ನು ಅನಾರೋಗ್ಯ ಕಾಡುತ್ತಿದೆ ಇದೇ ಕಾರಣಕ್ಕೆ ಆಟ ಆಡಲು ಆಗ್ತಿಲ್ಲ ಎಂದರು. ನನಗೆ ತುಂಬಾ ಸುಸ್ತಾಗುತ್ತಿದೆ. ನನ್ನ ದೇಹದಲ್ಲಿ ಶಕ್ತಿ ಇಲ್ಲ ಎಂದರು.