ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?

Sun, 01 Dec 2024-4:08 pm,

Shobha Shetty Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ನಿರ್ಧರಿಸಿರುವ ಶೋಭಾ ಶೆಟ್ಟಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಮೂರನೇ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ಶೋಭಾ ಶೆಟ್ಟಿ ಈ ವಾರ ಶೋ ನಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. 

ಎರಡು ವಾರದ ಹಿಂದೆ ಸಖತ್‌ ಸೌಂಡ್‌ ಮಾಡುತ್ತ ಬಿಗ್‌ ಬಾಸ್‌ ಕನ್ನಡ 11 ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ, ಈ ವಾರ ಪೂರ್ತಿ ಸೈಲೆಂಟ್‌ ಆಗಿದ್ದರು. ಈ ಹಿಂದೆ ತೆಲುಗು ಬಿಗ್‌ ಬಾಸ್‌ನಲ್ಲಿ ಫಿನಾಲೆಯ ಸನಿಹಕ್ಕೆ ಹೋಗಿದ್ದರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಬಂದ ಎರಡೇ ವಾರಕ್ಕೆ ಮನೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ. ಸುದೀಪ್‌ ಶೋಭಾ ಸೇಫ್‌ ಎನ್ನುತ್ತಿದ್ದಂತೆ ನನ್ನನ್ನು ಮನೆಗೆ ಕಳಿಸಿ. ಇಲ್ಲಿ ಇರಲು ಆಗುತ್ತಿಲ್ಲ ಎಂದು ದುಃಖಿಸಿ ಅತ್ತಿದ್ದಾರೆ.

ಸುದೀಪ್‌ ಕೂಡ ಈ ವೇಳೆ ಶೋಭಾ ಶೆಟ್ಟಿ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ಅವರು ಇರಲು ಒಪ್ಪದಿದ್ದಾಗ ಮೇನ್‌ ಡೋರ್‌ ಓಪನ್‌ ಆಗಿದೆ. 

ಬಿಗ್‌ ಬಾಸ್‌ ಕ್ವಿಟ್‌ ಮಾಡಲು ನಿರ್ಧರಿಸಿರುವ ಶೋಭಾ ಶೆಟ್ಟಿ ಈ ಹಿಂದೆ ಕನ್ನಡದ ಅಗ್ನಿ ಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಬಳಿಕ ತೆಲಗು ಕಿರುತೆರೆಗೆ ಕಾಲಿಟ್ಟಿದ್ದರು. 

ಬಿಗ್‌ ಬಾಸ್‌ ಮೂಲಕ ಶೋಭಾ ಶೆಟ್ಟಿ ಮತ್ತ ಕನ್ನಡಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಆದರೆ 15 ದಿನಕ್ಕೆ ಶೋ ಬಿಟ್ಟು ಹೊರಬರುವ ನಿರ್ಧಾರ ಮಾಡಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. 

ವರದಿಗಳ ಪ್ರಕಾರ, ಶೋಭಾ ಶೆಟ್ಟಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ 2.5 ಲಕ್ಷ ರೂಪಾಯಿ ಇರಬಹುದು ಎನ್ನಲಾಗುತ್ತಿದೆ. 

ಒಂದು ವೇಳೆ ಶೋಭಾ ಶೆಟ್ಟಿ ಇಂದು ಮನೆಯಿಂದ ಹೊರಬಂದಿದ್ದೇ ಆದಲ್ಲಿ 2 ವಾರಗಳ ಸಂಭಾವನೆ 5 ಲಕ್ಷದ ಜೊತೆಗೆ 2 ಲಕ್ಷದ ಬಹುಮಾನ ಸೇರಿ ಒಟ್ಟು 7 ಲಕ್ಷ ರೂಪಾಯಿಯನ್ನು ಬಿಗ್‌ ಬಾಸ್‌ನಿಂದ ಪಡೆಯಬಹುದು ಎಂದು ಹೇಳಲಾಗುತ್ತಿದೆ.

(ಗಮನಿಸಿ: ಇದು ವರದಿಗಳು ಮತ್ತು ವೈರಲ್‌ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ಅಧಿಕೃತ ಮಾಹಿತಿಯಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link