ಶೀಘ್ರವೇ ಮೊಳಗಲಿದೆ ನಾಗಾರ್ಜುನ ಮನೆಯಲ್ಲಿ ಗಟ್ಟಿಮೇಳ!! ಅದ್ದೂರಿಯಾಗಿ ನೆರವೇರಿತು ಶೋಭಿತಾ ಧೂಳಿಪಾಲ ಅರಿಶಿನ ಶಾಸ್ತ್ರ..! ಫೋಟೋಸ್‌ ವೈರಲ್‌

Mon, 21 Oct 2024-2:31 pm,

Naga Chaitanya Sobhita Dhulipala: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.   

ಇತ್ತೀಚೆಗೆ ನಟಿ ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಅವರ ಮದುವೆ ಕಾರ್ಯವೂ ಆರಂಭವಾಗಿದೆ. 

ಸೋಭಿತಾ ಹಲವು ಫೋಟೋಗಳನ್ನು ಪೋಸ್ಟ್ ಮಾಡಿ ಮದುವೆಯ ಕೆಲಸ ಆರಂಭವಾದ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.   

ಅಕ್ಕಿನೇನಿ ಮನೆಗೆ ಸೊಸೆಯಾಗಲಿರುವ ಶೋಭಿತಾ ಧೂಳಿಪಾಲ ಮದುವೆಯ ಕಾರ್ಯಕ್ಕೆ ಕೈ ಹಾಕಿದ್ದಾರೆ.   

ಸದ್ಯ ಈ ಫೋಟೊಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ.   

ಇತ್ತೀಚೆಗೆ ನಟಿ ಶೋಭಿತಾ ಧೂಳಿಪಾಲ ಅವರ ಮನೆಯಲ್ಲಿ ಅರಿಶಿನ ಜಜ್ಜುವ ಶಾಸ್ತ್ರ ನೆರವೇರಿದೆ, ಸದ್ಯ ಈ ಸಂದರ್ಭದ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.   

ಕಿತ್ತಳೆ ಮತ್ತು ಹಸಿರು ಬಣ್ಣದ ಸೀರೆಯಲ್ಲಿ, ಅರಿಶಿನವನ್ನು ಜಜ್ಜುವ ಕಾರ್ಯಕ್ರಮದಲ್ಲಿ ನಟಿ ಶೋಭಿತಾ ಸಂಪ್ರಾದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.   

ಈ ಕಾರ್ಯಕ್ರಮದಲ್ಲಿ ಸೋಭಿತಾ ಕುಟುಂಬದವರು ಹಾಗೂ ಬಂಧುಗಳು ಭಾಗವಹಿಸಿದ್ದರು.   

ಶೋಭಿತಾ ಈ ಫೋಟೋಗಳನ್ನು ಶೇರ್ ಮಾಡಿ ಪೋಸ್ಟ್ ಮಾಡಿದ್ದಾರೆ.  

ಇನ್ನೂ ಮದುವೆ ಯಾವಾಗ ಆಗುತ್ತೆ ಎಂದು ಈ ಜೋಡಿ ಅಧಿಕೃತವಾಗಿ ಹೇಳಿಲ್ಲವಾದರೂ, ನಡೆಯುತ್ತಿರುವ ಈ ಸಮಾರಂಭಗಳನ್ನು ನೋಡಿದರೆ, ಈ ಜೋಡಿ ಈ ತಿಂಗಳಿನಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ವರದಿಗಳಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link