ಮೈ ಬಣ್ಣದಿಂದ ಟೀಕೆಗೆ ಒಳಗಾಗಿದ್ದ ನಟಿ ಇಂದು ಹಾಲಿವುಡ್‌ನಲ್ಲಿ ದೊಡ್ಡ ಸ್ಟಾರ್..! ಯಾರೀಕೆ..?
ನಟಿಯಾಗಿ ಹೆಸರು ಮಾಡಲು ಇಂಡಸ್ಟ್ರಿಗೆ ಬರುವ ಹೊಸಬರಿಗೆ ಹಲವು ಅವಮಾನಗಳು ಎದುರಾಗುತ್ತವೆ. ಅವರಲ್ಲಿ ಸೋಭಿತಾ ಧೂಳಿಪಳ್ಳ ಕೂಡ ಒಬ್ಬರು. ಆರಂಭದಲ್ಲಿ 1000 ಕ್ಕೂ ಹೆಚ್ಚು ಆಡಿಷನ್‌ಗಳನ್ನು ನೀಡಿದ್ದ ಇವರು ತಮ್ಮ ಮೈ ಬಣ್ಣದಿಂದ ಅವಕಾಶಗಳನ್ನು ಕಳೆದುಕೊಂಡಿದ್ದರಂತೆ. ಈ ಕುರಿತು ಅವರೇ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
2013 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದ ಸೋಭಿತಾ ಧೂಳಿಪಳ್ಳ, ಆ ನಂತರ ಸಿನಿಮಾ ಜಗತ್ತಿಗೆ ಕಾಲಿಡಬೇಕು ಎಂದಾಗ ಹಲವು ಅವಮಾನ, ತಿರಸ್ಕಾರಗಳನ್ನು ಎದುರಿಸಿದ್ದರಂತೆ.
ಈ ವೆರೆಗೆ ಸೋಭಿತಾ ಧೂಳಿಪಳ್ಳ 1000 ಕ್ಕೂ ಹೆಚ್ಚು ಆಡಿಷನ್‌ಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ತಾವು ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ಜಾಹೀರಾತುಗಳಿಗಾಗಿ ಸಾಕಷ್ಟು ಆಡಿಷನ್ ಮಾಡಿದ್ದೇನೆ. ಚಿತ್ರಕ್ಕಾಗಿ ಮೂರು ವರ್ಷಗಳ ಕಾಲ ಕಾದಿದ್ದೇನೆ ಎಂದು ಸೋಭಿತಾ ಧೂಳಿಪಳ್ಳ ಸಿನಿಮಾಗೆ ಬರುವ ಮುನ್ನ ತಮಗಾದ ಎಕ್ಸ್‌ಪೀರಿಯನ್ಸ್ ಬಗ್ಗೆ ಬಿಚ್ಚಿಟ್ಟಿದ್ದಾರೆ.
ವೃತ್ತಿಜೀವನದ ಆರಂಭದಲ್ಲಿ ಸೋಭಿತಾ ಧೂಳಿಪಳ್ಳ ಅವರ ಚರ್ಮದ ಬಣ್ಣದ ಬಗ್ಗೆ ಕೀಟಲೆ ಮಾಡಲಾಗುತ್ತಿತ್ತಂತೆ. ನಟಿಯಾಗಲು ತಾವೇನು ಅಷ್ಟಗಿ ಚೆನ್ನಾಗಿಲ್ಲ ಎಂದು ಎಷ್ಟೋ ಜನ ತಮ್ಮನ್ನು ರಿಜೆಕ್ಟ್ ಮಾಡಿದ್ರಂತೆ.
ಅನುರಾಗ್ ಕಶ್ಯಪ್ ನಿರ್ದೇಶನದ ರಮಣ್ ರಾಘವ್ 2.0 ಚಿತ್ರದ ಮೂಲಕ ಶೋಭಿತಾ ಧೂಳಿಪಳ್ಳ ಚಿತ್ರರಂಗ ಪ್ರವೇಶಿಸಿದರು. ನಂತರ ತೆಲುಗು, ಹಿಂದಿ ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದ ನಟಿಸಿರುವ ಸೋಭಿತಾ ಧೂಳಿಪಳ್ಳ ಈ ಚಿತ್ರದ ಮೂಲಕ ಸಾಕಾಷ್ಟು ಜನಪ್ರಿಯತೆ ಗಳಿಸಿದರು.
ಸೋಭಿತಾ ಧೂಳಿಪಳ್ಳ , ದೇವ್ ಪಟೇಲ್ ನಿರ್ದೇಶನದ ಮಂಕಿ ಮ್ಯಾನ್ ಚಿತ್ರದ ಮೂಲಕ ಹಾಲಿವುಡ್ ಇಂಡಸ್ಟ್ರಿಗೆ ಪ್ರವೇಶಿಸಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಧೂಳಿಪಳ್ಳ ಹೊಂದಿದ್ದಾರೆ.