ಸರ್ಕಾರಿ ನೌಕರರಿಗೆ ಶಾಕಿಂಗ್ ಸುದ್ದಿ !DA ಬಗ್ಗೆ ಯಾರೂ ನಿರೀಕ್ಷಿಸದ ನಿರ್ಧಾರ ಪ್ರಕಟಿಸಿದ ಸರ್ಕಾರ!

Mon, 30 Sep 2024-9:53 am,

ನಿತ್ಯದ ಹಣದುಬ್ಬರವನ್ನು ಸರಿಹೊಂದಿಸಿಕೊಂಡು ಹೋಗಲು ನೆರವಾಗುವಂತೆ ಸರ್ಕಾರ ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತದೆ.ತುಟ್ಟಿಭತ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರಿ ನೌಕರರ ವೇತನದಲ್ಲಿ ಕೂಡಾ ಬದಲಾವಣೆಯಾಗುತ್ತದೆ. 

ಇದೀಗ ಸರ್ಕಾರಿ ನೌಕರರು ಜುಲೈ ತಿಂಗಳ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ಇವತ್ತಲ್ಲ ನಾಳೆ ಈ ಹೆಚ್ಚಳ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.   

ಕೆಲವು ದಿನಗಳ ಹಿಂದೆ ಬಿಡುಗಡೆಯಾದ  ಎಐಸಿಪಿಐ ಸೂಚ್ಯಂಕ ಸಂಖ್ಯೆ  ಆಧಾರದ ಮೇಲೆ ಈ ಬಾರಿ ತುಟ್ಟಿಭತ್ಯೆ 3% ಅಥವಾ 4 ರಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ.  

 ಈ ನಿರೀಕ್ಷೆಯ ಮಧ್ಯೆಯೇ ,ಸರ್ಕಾರ ಇದೀಗ ಶಾಕಿಂಗ್ ನಿರ್ಧಾರ ಪ್ರಕಟಿಸಿದೆ.18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ಸರ್ಕಾರ ತನ್ನ ನಿರ್ಧಾರ ಹೇಳಿದೆ. ಬಾಕಿ ಡಿಎ  ಪಾವತಿಸಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. 

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ,ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕರೋನಾ ಸಂದರ್ಭದಲ್ಲಿ ಸರ್ಕಾರ ತಡೆ ಹಿಡಿದಿದ್ದ 18 ತಿಂಗಳ ಡಿಎ/ಡಿಆರ್  ಅನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು  ಹೇಳಿದ್ದಾರೆ.   

ಕರೋನಾ ಅವಧಿಯಲ್ಲಿ ಸರ್ಕಾರಿ ನೌಕರರ 18 ತಿಂಗಳ ತುಟ್ಟಿಭತ್ಯೆ ಪಾವತಿಯನ್ನು ಸರ್ಕಾರ ನಿಲ್ಲಿಸಿತ್ತು.ಈ ಬಾಕಿ ಡಿಎ ಹಣವನ್ನು ನೀಡಬೇಕೆಂದು ಕೇಂದ್ರ ನೌಕರರು ಬಹಳ ದಿನಗಳಿಂದ ಬೇಡಿಕೆ  ಇಡುತ್ತಲೇ ಬಂದಿದ್ದಾರೆ.     

ಇದೀಗ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ್ದು, 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶಾಕ್ ನೀಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link