ದೆಹಲಿಯಲ್ಲಿ ಭಾರಿ ಬೆಂಕಿ ಅವಘಡ, 90 ವಾಹನಗಳು ಸುಟ್ಟು ಭಸ್ಮ!
ಬೆಂಕಿ ನಂದಿಸಲಾಗಿದೆ. ಅವಘಡದ ಕುರಿತು ತನಿಖೆ ನಡೆಯುತ್ತಿದೆ.
ಬೆಂಕಿಗೆ ಕಾರಣ ಏನು ಎಂಬುದು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
"ಮೆಟ್ರೋ ಪಾರ್ಕಿಂಗ್ ಸ್ಥಳದಲ್ಲಿ 10 ಕಾರುಗಳು, 1 ಮೋಟಾರ್ ಸೈಕಲ್, 2 ಸ್ಕೂಟಿ, 30 ಹೊಸ ಇ-ರಿಕ್ಷಾಗಳು, 50 ಹಳೆಯ ಇ-ರಿಕ್ಷಾಗಳು ಬೆಂಕಿಗೆ ಹಾನಿಯಾಗಿದೆ" ಎಂದು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ.
ದೆಹಲಿಯ ಅಗ್ನಿಶಾಮಕ ಅಧಿಕಾರಿಗಳು ಜಾಮಿಯಾ ನಗರದ ಮೇನ್ ಟಿಕೋನಾ ಪಾರ್ಕ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ಈ ಬೆಂಕಿ ಅವಘಡದ ಕುರಿತು ಕರೆ ಸ್ವೀಕರಿಸಿದರು. 11 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ಒಳಪಡಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸಂಭವಿಸಿದ ಬೆಂಕಿಯಲ್ಲಿ 10 ಕಾರುಗಳು ಮತ್ತು 80 ಇತರ ವಾಹನಗಳು ಸುಟ್ಟು ಹೋಗಿವೆ. (ANI ಫೋಟೋಗಳು)