ಶಾಕಿಂಗ್ : 10 ಕೋಟಿ Debit-Credit ಕಾರ್ಡ್ ಬಳಕೆದಾರರ ಡೇಟಾ ಸೋರಿಕೆ

Tue, 05 Jan 2021-9:41 pm,

ವರದಿಗಳ ಪ್ರಕಾರ, ಕಾರ್ಡ್ ಹೊಂದಿರುವವರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ಸೋರಿಕೆಯಾದ ಜನರಿಗೆ ಇದು ಅಪಾಯದ ವಿಷಯವಾಗಿದೆ. ಏಕೆಂದರೆ ಖಾತೆದಾರರ ಹೆಸರು, ಅವರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ಸೂಕ್ಷ್ಮ ಮಾಹಿತಿಯು ಸೋರಿಕೆಯಾಗಿದೆ. ಅಲ್ಲದೆ ಮೊದಲ ನಾಲ್ಕು ಅಂಕೆಗಳು ಮತ್ತು ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್‌ಗಳ ಕೊನೆಯ ನಾಲ್ಕು ಅಂಕೆಗಳು, ಕಾರ್ಡ್‌ನ ಮುಕ್ತಾಯ ದಿನಾಂಕವೂ ಸಹ ಸೋರಿಕೆಯಾಗಿದ್ದು, ಅವುಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ವರದಿಯಾಗಿದೆ.

ವರದಿಗಳ ಪ್ರಕಾರ, ಜುಸ್ಪೇ ಹೆಸರಿನ ಪಾವತಿ ಗೇಟ್‌ವೇಯಿಂದ ಕಾರ್ಡ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಜುಸ್ಪೇ ಅಮೆಜಾನ್ ಆನ್‌ಲೈನ್ ಫುಡ್ ಬುಕಿಂಗ್ ಪ್ಲಾಟ್‌ಫಾರ್ಮ್ ಸ್ವಿಗ್ಗಿ (Swiggy) ಮತ್ತು ಮೇಕ್‌ಮೈಟ್ರಿಪ್‌ನ ಬುಕಿಂಗ್ ಪಾವತಿಯನ್ನು ಪ್ರಕ್ರಿಯೆಗೊಳಿಸುತ್ತದೆ.

ವರದಿಗಳ ಪ್ರಕಾರ ಸುಮಾರು 10 ಕೋಟಿ ಜನರ ಡೇಟಾವು 2020 ರ ಆಗಸ್ಟ್‌ನಲ್ಲಿ ಸೋರಿಕೆಯಾಗಿದೆ ಎಂದು ತಿಳಿಸಲಾಗಿದೆ. ಡಾರ್ಕ್ ವೆಬ್ಗೆ ಹೋದ ಡೇಟಾವು ಮಾರ್ಚ್ 2017 ರಿಂದ ಆಗಸ್ಟ್ 2020 ರವರೆಗೆ ಬಳಕೆದಾರರ ಮಾಹಿತಿಯನ್ನು ಒಳಗೊಂಡಿದೆ ಎಂದು ಸಹ ಬಹಿರಂಗವಾಗಿದೆ.

ಇದನ್ನೂ ಓದಿ : SBI ಗ್ರಾಹಕರಿಗೆ ಒಳ್ಳೆಯ ಸುದ್ದಿ, Bank ಸೌಲಭ್ಯಗಳನ್ನು ಈಗ ಮನೆಯಿಂದಲೇ ಪಡೆಯಿರಿ

ಈ ಹಿಂದೆ ಡಿಸೆಂಬರ್‌ನಲ್ಲಿ 70 ಲಕ್ಷ ಭಾರತೀಯರ ಡೆಬಿಟ್ ಕಾರ್ಡ್ (Debit Card) ಡೇಟಾ ಸೋರಿಕೆಯಾಗಿದೆ ಎಂದು ವರದಿಯಾಗಿದೆ.  

ಇದನ್ನೂ ಓದಿ : Dearness Allowance:ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೊಂದು ಸಂತಸದ ಸುದ್ದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link